ಉಡುಪಿ : ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಕೋಮುವಾದಿ ಧೋರಣೆಯಿಂದ ಪಕ್ಷಪಾತೀಯ ನಿಲುವು ತಾಳಿ ಪಿಎಫ್‌ಐ ಸಂಘಟನೆ ಹಾಗೂ ರಾಜಕೀಯ ಪಕ್ಷವಾಗಿರುವ ಎಸ್ಟಿಪಿಐ ಯ ನಾಯಕರುಗಳ ಬಂಧನ ಮಾಡಿ ಈ ದೇಶದ ಸಂವಿಧಾನಕ್ಕೆ ಅಪಚಾರವೆಸಗುವ ಕೆಲಸವನ್ನು ಇಂದು ಕೇಂದ್ರ ಸರ್ಕಾರ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಸಂಸ್ಥೆ ಹೇಳಿದೆ.
ಯಾವುದೇ ತನಿಖೆ ನಡೆಸಿ ಸೂಕ್ತ ಸಾಕ್ಷಾಧಾರ ಇಲ್ಲದೆ ಸುಮ್ಮನೆ ಬಂಧನ ಮಾಡಿರುವುದು ಈ ದೇಶದ ಕಾನೂನು ವ್ಯವಸ್ಥೆಗೆ ಮಾಡಿರುವ ಅಪಚಾರವಾಗಿದೆ. ಇದೇ ರೀತಿ ಮುಂದುವರೆದರೆ ಈ ದೇಶದ ಸಾಂವಿಧಾನಿಕ ಸಂಸ್ಥೆಗಳಿಗೆ ಯಾವುದೇ ರೀತಿಯ ಮೌಲ್ಯವಿಲ್ಲದೆ, ರಾಜಕೀಯದ ಗೂಂಡಾಯಿಸಂನ ಬಲಿಪಶು ಆಗುವುದರಲ್ಲಿ ಸಂಶಯವಿಲ್ಲದಂತಾಗಲಿದೆ.
ಯಾವುದೇ ಸಂಘಟನೆ ಅಥವಾ ಪಕ್ಷಗಳಾದರೂ ಅದಕ್ಕೆ ತನ್ನದೇ ಆದ ನಿಲುವು ಇದ್ದು, ಅದರ ಬಗ್ಗೆ ಭಿನ್ನಾಭಿಪ್ರಾಯಗಳು ಸರ್ವೇ ಸಾಮಾನ್ಯ. ಆ ಕಾರಣಕ್ಕೆ ಸಾಂವಿಧಾನಿಕ ಸಂಘಟನಾ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಭಾರತದ ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಮಾನ. ಆದ್ದರಿಂದ ಇಂತಹ ಅರಾಜಕತೆಯನ್ನು ತಕ್ಷಣ ನಿಲ್ಲಿಸಬೇಕೆಂದು ಎಪಿಸಿಆರ್ ನ ಉಡುಪಿ ಜಿಲ್ಲಾ ಘಟಕ ಆಗ್ರಹಿಸಿದೆ.
Kshetra Samachara
26/09/2022 09:44 pm