ಎಲ್ಲಾ ಮಸೀದಿಗಳಲ್ಲಿ ಶಿವಲಿಂಗ ಹುಡುಕಬೇಡಿ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಕರೆಕೊಟ್ಟಿದ್ದಾರೆ.ಈ ವಿಚಾರವಾಗಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ರಘುಪತಿ ಭಟ್ ,ಭಾಗವತ್ ಹೇಳಿದ್ದನ್ನು ಖಂಡಿತವಾಗಿ ಎಲ್ಲರೂ ಕೇಳುತ್ತಾರೆ.
ಎಲ್ಲಾ ಮಸೀದಿಗಳನ್ನು ಹುಡುಕಲು ಹೋಗಬೇಡಿ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಈಗ ಇರುವುದನ್ನು ಸರಿ ಮಾಡಿಕೊಳ್ಳೋಣ ಎಂಬುದು ಅದರ ಅರ್ಥ.ಕೆಲವು ಕುರುಹುಗಳು ಸಿಕ್ಕಾಗ ಭಾವನೆಗೆ ಧಕ್ಕೆ ಆಗುತ್ತವೆ. ನಮ್ಮ ಮೂಲಸ್ಥಾನಕ್ಕಾಗಿ ಹುಡುಕಿಕೊಂಡು ಹೋಗಿ ಜೀರ್ಣೋದ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.
ಸೌಹಾರ್ದತೆ ಇರಬೇಕೆಂದು ಭಾಗವತ್ ಭಾಷಣದಲ್ಲಿ ಮಾತನಾಡಿದ್ದಾರೆ. ಜನರು ಭಾವನಾತ್ಮಕವಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
Kshetra Samachara
04/06/2022 06:45 pm