ಉಡುಪಿ: ನಿಟ್ಟೂರು ಎಜುಕೇಶನಲ್ ಸೊಸೈಟಿ ವಾರ್ಷಿಕ ಮಹಾಸಭೆ ಕೆ.ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯದರ್ಶಿ ಭಾಸ್ಕರ್ ಡಿ. ಸುವರ್ಣ ವರದಿ ಮಂಡಿಸಿದರು. ಕೋಶಾಧಿಕಾರಿ ಮುರ ಳಿ ಕಡೇಕಾರ್ ಪರಿಶೋಧಿತ ಲೆಕ್ಕಪತ್ರ ಮಂಡಿಸಿದರು. ಬಳಿಕ 2020-21ನೇ ಸಾಲಿಗೆ ನೂತನ ಆಡಳಿತ ಮಂಡಳಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷ : ಕೆ. ರಘುಪತಿ ಭಟ್, ಉಪಾಧ್ಯಕ್ಷರು : ಎಸ್. ವಿ. ಭಟ್, ಎಂ.ಗಂಗಾಧರ ರಾವ್, ಯೋಗೀಶ್ಚಂದ್ರಾಧರ, ಕಾರ್ಯದರ್ಶಿ : ಮುರಳಿ ಕಡೇಕಾರ್, ಜತೆ ಕಾರ್ಯದರ್ಶಿ : ಪಿ. ದಿನೇಶ್ ಪೂಜಾರಿ, ಕೋಶಾಧಿಕಾರಿ : ಅನಸೂಯ. ಸದಸ್ಯರು : ಕೆ. ಎ. ಪಿ.ಭಟ್, ಭಾಸ್ಕರ ಡಿ.ಸುವರ್ಣ, ಕೆ.ಸುಬ್ರಹ್ಮಣ್ಯ ಭಟ್, ಯು.ರವಿಕಾಂತ, ಆಲ್ಫ್ರೆಡ್ ಕರ್ನೇಲಿಯೋ, ಸಂತೋಷ ಕರ್ನೇಲಿಯೋ, ರಾಮಚಂದ್ರ ಆಚಾರ್, ಯು. ಬಿ. ಅಜಿತ್ ಕುಮಾರ್, ಕೃಷ್ಣಮೂರ್ತಿ ಭಟ್, ಪಿ. ಪರಶುರಾಮ ಶೆಟ್ಟಿ, ಪ್ರಭಾಕರ ಪೂಜಾರಿ, ಪ್ರಭಾಕರ ಜಿ., ವಸಂತ ಎನ್., ಪ್ರೇಮಾನಂದ ಆಚಾರ್ಯ. 2020-21ನೇ ಸಾಲಿಗೆ ಲೆಕ್ಕ ಪರಿಶೋಧಕರಾಗಿ ಸಿ.ಎ. ಪ್ರದೀಪ್ ಜೋಗಿಯವರನ್ನು ನಿಯುಕ್ತಿಗೊಳಿಸಲಾಯಿತು.
ಈ ಸಂದರ್ಭ ಮಾತನಾಡಿದ ಶಾಸಕ ಕೆ.ರಘುಪತಿ ಭಟ್, ಕೊರೊನಾ ನಡುವೆಯೂ 50 ಎಕ್ರೆ ಹಡಿಲು ಗದ್ದೆ ಬೇಸಾಯ ಮಾಡಿ ಸುವರ್ಣ ಪರ್ವ ಅರ್ಥಪೂರ್ಣವಾಗಿ ಆಚರಿಸುವಂತಾಯಿತು. ಶಾಲೆಯ ಎಲ್ಲಅಭಿವೃದ್ಧಿ ಕಾಮಗಾರಿ ಮುಂದಿನ ತಿಂಗಳೊಳಗೆ ಪೂರೈಸಿ, ಸಮಾಜ ಮೆಚ್ಚುವ ರೀತಿಯಲ್ಲಿ ಈ ಕನ್ನಡ ಮಾಧ್ಯಮ ಶಾಲೆ ಉಳಿಸಿ, ಬೆಳೆಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ದಿನೇಶ್ ಪಿ.ಪೂಜಾರಿ ಶಾಲೆಯ ಸುವರ್ಣ ಪರ್ವಕ್ಕೆ 1ಲಕ್ಷ ರೂ. ದೇಣಿಗೆ ಅಧ್ಯಕ್ಷ ಕೆ.ರಘುಪತಿ ಭಟ್ ರಿಗೆ ಹಸ್ತಾಂತರಿಸಿದರು. ಆರಂಭದಲ್ಲಿ ಶಾಲೆ ಸ್ಥಾಪಕ ಸದಸ್ಯರಾದ ಪಿ.ಎಂ.ರಾಮಕೃಷ್ಣ ಆಚಾರ್ ಮತ್ತು ಪಿ.ರಾಮ ಭಟ್ ಹಾಗೂ ಲೆಕ್ಕ ಪರಿಶೋಧಕ ಬಿ.ಡಿ. ಶೆಟ್ಟರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
Kshetra Samachara
21/09/2020 09:56 pm