ರಾಷ್ಟ್ರೀಯ ಹಿಂದುಳಿದ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಅವರ ತಲೆ ತೆಗೆದರೆ 10 ಲಕ್ಷ ರೂ. ಘೋಷಿಸಿದ್ದ mari_Gudi_6 ಎಂಬ ಇನ್‌ಸ್ಟಾಗ್ರಾಮ್ ಖಾತೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂದೂ ಯುವಸೇನೆ ಸಹಿತ ವಿವಿಧ ಹಿಂದೂ ಸಂಘಗಳು ಒತ್ತಾಯಿಸಿವೆ. ಈ ಸಂಬಂಧ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿವೆ.
mari_Gudi_6 ಎಂಬ ಇನ್‌ಸ್ಟಾಗ್ರಾಮ್ ಪೇಜಿನಲ್ಲಿ ಈ ಎರಡು ಹಂದಿಗಳ ತಲೆ ಕಡೆದರೆ 20 ಲಕ್ಷ ಎಂದು ಘೋಷಿಸಲಾಗಿತ್ತು. ಯಶ್ಪಾಲ್ ಸುವರ್ಣ ಮತ್ತು ಪ್ರಮೋದ್ ಮುತಾಲಿಕ್ ತಲೆ ಉರುಳುವುದು ಖಚಿತ ಎಂದು ಬೆದರಿಕೆ ಒಡ್ಡಲಾಗಿತ್ತು. ಈ ಕುರಿತು ಯಶ್ಪಾಲ್ ಸುವರ್ಣ ಯಾವುದೇ ದೂರು ನೀಡಿಲ್ಲವಾದರೂ ಹಿಂದೂ ಸಂಘಟನೆಗಳು ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿವೆ.
PublicNext
09/06/2022 03:05 pm