ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭ ರಾಜ್ಯ ಆರೋಗ್ಯ ಸಚಿವ ಡಾ. ಸುಧಾಕರ್ ಯಕ್ಷಗಾನ ವೇಷ ಧರಿಸಿ ಸಂಭ್ರಮಿಸಿದ ಅಪರೂಪದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಪರಿಶೀಲನೆ ಮತ್ತು ಇತರ ವಿಚಾರಗಳ ಚರ್ಚೆಗೆ ಆಗಮಿಸಿದ್ದರು. ಮಂಗಳವಾರ ರಾತ್ರಿ ಸುನಿಲ್ ನಾಯ್ಕ್ ಅವರ ಭಟ್ಕಳದ ಮನೆಯಲ್ಲಿ ಆಯೋಜಿಸಲಾಗಿದ್ದ ಯಕ್ಷಗಾನ ಕಾರ್ಯಕ್ರಮಕ್ಕೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಡಾ. ಸುಧಾಕರ್ ಭೇಟಿ ನೀಡಿದ್ದರು.
ಬಹಳ ಹೊತ್ತು ಕುಳಿತು ಯಕ್ಷಗಾನ ವೀಕ್ಷಿಸಿ ಆಸ್ವಾದಿಸಿದ ಸಚಿವ ಸುಧಾಕರ್ ಬಳಿಕ ವೇಷಧಾರಿಯಾಗುವ ಇಚ್ಚೆ ವ್ಯಕ್ತಪಡಿಸಿದ್ದಾರೆ.
ಯಕ್ಷಗಾನದ ವೇಷ ಧರಿಸಿ, ಕಿರೀಟ ತೊಟ್ಟು ವೇದಿಕೆಗೆ ಬಂದಾಗ ಚಪ್ಪಾಳೆಗಳ ಸುರಿಮಳೆಯೇ ಆಯಿತು. ಇತರ ವೇಷಧಾರಿಗಳೂ ವೇಷಧಾರಿ ಸಚಿವರ ಜೊತೆ ಫೋಟೋ ತೆಗೆಸಿಕೊಂಡರು.
Kshetra Samachara
12/10/2022 09:19 pm