ಬೆಂಗಳೂರಿನಲ್ಲಿ ಉರ್ದು ಮಾತಾಡಿಲ್ಲ ಎಂಬ ವಿಷಯಕ್ಕೆ ಕೊಲೆ ನಡೆಯುತ್ತಿದೆ ಎಂದಾರೆ ಈ ದೇಶಕ್ಕೆ ಭವಿಷ್ಯ ಇಲ್ಲ. ಅದೇ ಕೃತ್ಯ ಹಿಂದೂ ಮೊಹಲ್ಲಾದಲ್ಲಿ ಆಗಿದ್ದರೆ ಯಾರಾದರೂ ಹಿಂದುಗಳು ಹೋಗಿ ಆ ಕೊಲೆಯನ್ನು ತಪ್ಪಿಸುತ್ತಿದ್ದರು. ಆದರೆ ಅಲ್ಲಿ ತುಂಬ ಜನ ಮುಸಲ್ಮಾನರು ಓಡಾಡುತ್ತಿದ್ದರು. ಯಾರು ಕೂಡ ನೆರವಿಗೆ ಬಂದಿಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ಮುಸ್ಲಿಂ ಸಮಾಜ ಭಯೋತ್ಪಾದಕ ಸಂಘಟನೆ ಮತ್ತಿತರ ಸಂಘಟನೆಗಳಿಂದ ಒತ್ತಡಕ್ಕೆ ಒಳಗಾಗಿ ಭಯದಲ್ಲಿ ಬದುಕುತ್ತಿದ್ದಾರೆ. ಆದರೆ ಇನ್ನು ಮೌನ ವಹಿಸಬಾರದು. ಬೆಂಗಳೂರಿನಲ್ಲಿ ಆದ ಈ ಘಟನೆಗೆ ಯಾವುದೇ ರಾಜಕೀಯ ಬಣ್ಣ ನೀಡಬೇಕಾಗಿಲ್ಲ.ಇಂತಹ ಘಟಕಗಳು ನಡೆದಾಗ ಹಿಂದುಗಳು ಜಾಗೃತರಾಗುತ್ತಾರೆ ಎಂದು ಅವರು ಹೇಳಿದ್ದಾರೆ.
PublicNext
06/04/2022 01:16 pm