ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಮತ್ತು ಕಡೆಕಾರು ಗ್ರಾಮೀಣ ಕಾಂಗ್ರೆಸ್ ಸಮಿತಿ ಜಂಟಿ ಆಶ್ರಯದಲ್ಲಿ ಕಡೆಕಾರು ಗ್ರಾಪಂ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆ ನಾರಾಯಣ ಗುರು ಸಭಾಭವನದಲ್ಲಿ ಜರುಗಿತು.
ಈ ಸಂದರ್ಭ ಮನಪಾ ಸದಸ್ಯ, ಕೆಪಿಸಿಸಿ ಪ್ಯಾನಲಿಸ್ಟ್ ಹಾಗೂ ಉಡುಪಿ ಬ್ಲಾಕ್ ಸಂಯೋಜಕ ವಿನಯರಾಜ್ ಮಾತನಾಡಿ, ಬಿಜೆಪಿ ಸರಕಾರದ “ಉಜ್ವಲ” ಯೋಜನೆಯಲ್ಲಿ ಗ್ಯಾಸ್ ಸ್ಟವ್ ಹಾಗೂ ಅಡುಗೆ ಅನಿಲ ಸಿಲಿಂಡರ್ ನೀಡಿ ನಂತರ ಕಂತುಗಳಲ್ಲಿ ಹಣ ಫಲಾನುಭವಿಗಳಿಂದ ಹಿಂಪಡೆಯುವ ಯೋಜನೆ ಎಂದು ಟೀಕಿಸಿದರು. ರಾಜ್ಯದಲ್ಲಿ ಸಿದ್ಧರಾಮಯ್ಯನವರ ಸರಕಾರ “ಅನಿಲ ಭಾಗ್ಯ” ಯೋಜನೆಯಲ್ಲಿ ಅರ್ಹರಿಗೆ ಗ್ಯಾಸ್ ಸ್ಟವ್ ಹಾಗೂ ಅಡುಗೆ ಅನಿಲ ಸಿಲಿಂಡರನ್ನು ಉಚಿತವಾಗಿ ನೀಡಿತ್ತು ಎಂದು ನೆನಪಿಸಿದರು. ಕೋವಿಡ್-19 ಲಾಕ್‍ಡೌನ್ ಸಂದರ್ಭ ಕಾಂಗ್ರೆಸ್ ಸರಕಾರದ ಯೋಜನೆಗಳಾದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಎಂ.ನರೇಗಾ ಯೋಜನೆ) ಹಾಗೂ ಅನ್ನಭಾಗ್ಯ ಯೋಜನೆಗಳಿಂದ ರಾಜ್ಯದ ಜನತೆ ಹೆಚ್ಚು ಪ್ರಯೋಜನ ಪಡೆದಿದ್ದು ಯೋಜನೆಯ ಸಾರ್ಥಕತೆ ಬಿಂಬಿಸುತ್ತದೆ ಎಂದರು.
ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ, ವನಜ ಜಯಕರ್ ಮಾತನಾಡಿದರು. ಹಿರಿಯರಾದ ಧರ್ಮಪಾಲ್, ವಾಮನ ಬಂಗೇರ, ಹಿರಿಯ ನ್ಯಾಯವಾದಿ ಕೆ. ಸಂಜೀವ, ಕೇಶವ ಎಂ. ಕೋಟ್ಯಾನ್, ಜಗನ್ನಾಥ ಸನಿಲ್, ವೀಕ್ಷಕರಾದ ಸುಕೇಶ್ ಕುಂದರ್, ಚಂದ್ರಮೋಹನ್, ಸತೀಶ್ ಪುತ್ರನ್, ಆಕಾಶ್, ಶ್ರೀನಿವಾಸ ಹೆಬ್ಬಾರ್, ನಿಕಟಪೂರ್ವ ಪಂ. ಸದಸ್ಯರಾದ ನವೀನ್ ಶೆಟ್ಟಿ, ಜಯಕರ ಕನ್ನರ್ಪಾಡಿ, ಆಶಾ ಜಿ. ಶೆಟ್ಟಿ, ಅಶೋಕ ಕುಮಾರ್ ಶೆಟ್ಟಿ, ತಾರಾನಾಥ ಸುವರ್ಣ, ನಿರ್ಮಲ ಜತಿನ್ ಕಡೆಕಾರ್, ವಿನಯ ಪ್ರಕಾಶ್, ಧನಂಜಯ, ಬ್ಲಾಕ್ ಉಪಾಧ್ಯಕ್ಷರಾದ ಸದಾಶಿವ ಅಮೀನ್ ಕಟ್ಟೆಗುಡ್ಡೆ, ನಾರಾಯಣ ಕುಂದರ್, ಉಪಸ್ಥಿತರಿದ್ದರು. ತಾರಾನಾಥ ಸುವರ್ಣ ಸ್ವಾಗತಿಸಿದರು. ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ನಿರೂಪಿಸಿದರು.
Kshetra Samachara
05/10/2020 11:47 pm