ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೊರೊನಾ ಸುರಕ್ಷಾ ಕ್ರಮಗಳೊಂದಿಗೆ ನಾಳೆ ಗ್ರಾ.ಪಂ ಚುನಾವಣೆ

ಉಡುಪಿ: ಜಿಲ್ಲೆಯಲ್ಲಿ ಡಿ.22 ಮತ್ತು 27 ರಂದು ನಡೆಯುವ ಗ್ರಾಪಂ ಚುನಾವಣೆ ಜಿಲ್ಲೆಯ ಒಟ್ಟು 153 ಗ್ರಾಪಂ ಗಳಲ್ಲಿ ನಡೆಯಲಿದ್ದು, ಕೋವಿಡ್19 ಹಿನ್ನೆಲೆಯಲ್ಲಿ ಈ ಎಲ್ಲ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೊರೊನಾ ಸುರಕ್ಷಿತ ಕಿಟ್‌ಗಳನ್ನು ರಾಜ್ಯ ಚುನಾವಣಾ ಆಯೋಗ ಸರಬರಾಜು ಮಾಡಿದೆ.

ಎಂ.ಎಸ್.ಐ.ಎಲ್ ನಿಂದ ಸರಬರಾಜು ಮಾಡಿರುವ ಈ ಕಿಟ್‌ಗಳಲ್ಲಿ, 500 ಎಂಲ್‌ನ 4 ಸ್ಯಾನಿಟೈಸ್ ಬಾಟಲ್, 100 ಎಂಎಲ್‌ನ 6 ಸ್ಯಾನಿಟೈಸ್ ಬಾಟಲ್, ಟ್ರಿಪಲ್ ಲೇಯರ್ ಸರ್ಜಿಕಲ್ ಮಾಸ್ಕ್ 20, ಫೇಸ್ ಶೀಲ್ಡ್-6 ಮತ್ತು 6 ಜೊತೆ ಹ್ಯಾಂಡ್ ಗ್ಲೌಸ್ ಗಳು ಹಾಗೂ 1 ಬಯೋ ಮೆಡಿಕಲ್ ಡಿಸ್ಪೋಸಲ್ ಬ್ಯಾಗ್‌ ಈ ಕಿಟ್ ಒಳಗೊಂಡಿದೆ.

ಜಿಲ್ಲೆಗೆ ಒಟ್ಟು 1260 ಕಿಟ್‌ಗಳು ಹಾಗೂ 620 ಥರ್ಮಲ್ ಸ್ಕ್ಯಾನರ್‌ಗಳು ಸರಬರಾಜಾಗಿದ್ದು, ಒಟ್ಟು 5040 ಚುನಾವಣಾ ಸಿಬ್ಬಂದಿಗೆ ಈ ಕಿಟ್‌ಗಳ ಪ್ರಯೋಜನ ದೊರೆಯಲಿದೆ. ಪ್ರತಿ ಮತಗಟ್ಟೆಗೆ 4 ಚುನಾವಣಾ ಸಿಬ್ಬಂದಿ ಇರಲಿದ್ದು, ಪ್ರತಿ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ಮತದಾರರು ಸಾಮಾಜಿಕ ಅಂತರ ಕಾಯ್ದುಕೊಂಡು ಮತ ಚಲಾಯಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಥರ್ಮಲ್ ಸ್ಕ್ಯಾನರ್ ಮೂಲಕ ಮತದಾರರನ್ನು ಪರೀಕ್ಷಿಸಲು ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಲಾಗಿದೆ.

ಡಿ. 22 ರಂದು ನಡೆಯುವ ಮೊದಲ ಹಂತದ ಚುನಾವಣೆಗಾಗಿ, ಉಡುಪಿ ತಾಲೂಕಿಗೆ 171, ಬೈಂದೂರಿಗೆ 138, ಬ್ರಹ್ಮಾವರಕ್ಕೆ 219 ಮತ್ತು ಹೆಬ್ರಿ ತಾಲೂಕಿಗೆ 72 ಕಿಟ್‌ಗಳನ್ನು ಹಾಗೂ ಡಿ. 27 ರಂದು ನಡೆಯುವ ಎರಡನೇ ಹಂತದ ಚುನಾವಣೆಗಾಗಿ ಕುಂದಾಪುರ ತಾಲೂಕಿಗೆ 287, ಕಾರ್ಕಳ 205 ಮತ್ತು ಕಾಪು ತಾಲೂಕಿಗೆ 151 ಕಿಟ್‌ಗಳನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ ಬಳಸಿದ ಥರ್ಮಲ್ ಸ್ಕ್ಯಾನರ್‌ಗಳನ್ನು ಎರಡನೇ ಹಂತದ ಚುನಾವಣೆ ನಡೆಯುವ ಮತಗಟ್ಟೆಗಳಲ್ಲಿ ಬಳಸಿಕೊಳ್ಳಲಾಗುವುದು.

Edited By : Vijay Kumar
Kshetra Samachara

Kshetra Samachara

21/12/2020 07:08 pm

Cinque Terre

5.69 K

Cinque Terre

0

ಸಂಬಂಧಿತ ಸುದ್ದಿ