ಕಾರ್ಕಳ: ಎರಡು ವರ್ಷ ಗಳ ಬಳಿಕ ಇಂದು ನಡೆಯುತ್ತಿರುವ ಪ್ರಪ್ರಥಮ ಕಾರ್ಕಳ ಪುರಸಭೆ ಸಾಮಾನ್ಯ ಸಭೆಗೆ ಸುದ್ದಿ ಮಾಧ್ಯಮಕ್ಕೆ ಹಾಜರಾಗದಂತೆ ಪುರಸಭೆ ಆಡಳಿತ ನಿರ್ಬಂಧ ಹೇರಿದ್ದು, ಈ ಬಗ್ಗೆ ಪುರಸಭೆ ಸದಸ್ಯ ಶುಭದ್ ರಾವ್ ತೀವ್ರವಾಗಿ ವಿರೋಧಿಸಿ, ಆಡಳಿತದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಹಾಗೂ ಅಧ್ಯಕ್ಷರು ಪತ್ರಿಕಾ ಸ್ವಾತಂತ್ರ್ಯ ವನ್ನು ಹತ್ತಿಕ್ಕುವ ಪ್ರಯತ್ನದ
ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡುವ ಕೆಲಸ ನಡೆಯುತ್ತಿದೆ ಎಂದು ಶುಭದ ರಾವ್ ಗುಡುಗಿದ್ದಾರೆ.
ಇದು ಸರಿಯಲ್ಲ, ಇಲ್ಲಿ ನಡೆಯುವ ಪ್ರತಿಯೊಂದು ಚರ್ಚೆ, ನಿರ್ಣಯಗಳು ಪಾರದರ್ಶಕವಾಗಿರಬೇಕು. ಅದಕ್ಕೆ ಮಾಧ್ಯಮ ಸಾಕ್ಷಿಯಾಗಿರಬೇಕು. ಇದೀಗ ಮಾಧ್ಯಮವನ್ನು ನಿರ್ಬಂಧಿಸಿ ಏನು ಸಾಧನೆ ಮಾಡಲು ಹೊರಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
Kshetra Samachara
18/12/2020 12:24 pm