ಉಡುಪಿ: ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠ ಇತ್ತೀಚೆಗೆ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‍ನ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆ ರದ್ದುಗೊಳಿಸಿ ಆದೇಶ ನೀಡಿದೆ.
ರೋಸ್ಟರ್ ಪದ್ಧತಿ ಅನುಸರಿಸಿ ಅಧ್ಯಕ್ಷ, ಉಪಾಧ್ಯಕ್ಷರ ಯಾದಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರಕಾರಕ್ಕೆ ಆದೇಶಿಸಿದೆ.
ಆ ಪ್ರಕಾರ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಪ್ರಸ್ತುತ ಹುದ್ದೆ ಅಮಾನತು ಗೊಂಡಿರುವುದರಿಂದ ಅವರಿಗೆ ಯಾವುದೇ ಅಧಿಕಾರಿಗಳ ಸಭೆ ಅಥವಾ ಸಾಮಾನ್ಯ ಸಭೆ ಜರುಗಿಸಲು ಸಾಂವಿಧಾನಿಕ ಹಕ್ಕು ಇರುವುದಿಲ್ಲ.
ಉಡುಪಿ ನಗರಸಭೆ ಈಗಾಗಲೇ ಸಾಮಾನ್ಯ ಸಭೆ ನಡೆಯುವ ಬಗ್ಗೆ ಎಲ್ಲ ನಗರಸಭೆ ಸದಸ್ಯರಿಗೆ ಹಾಗೂ ಸಂಬಂಧಪಟ್ಟವರಿಗೆ ಕಾರ್ಯಸೂಚಿ ವಿತರಿಸಿದೆ.
ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಈ ಸಾಮಾನ್ಯ ಸಭೆಯ ಸಿಂಧುತ್ವದ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಮನವಿ ಸಲ್ಲಿಸಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಣ್ಣಯ್ಯ ಶೇರಿಗಾರ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್, ನಗರಸಭೆ ಸದಸ್ಯರಾದ ಅಮೃತಾ ಕೃಷ್ಣಮೂರ್ತಿ, ರಮೇಶ್ ಕಾಂಚನ್, ಸೆಲಿನ್ ಕರ್ಕಡ, ವಿಜಯ ಪೂಜಾರಿ, ಮಾಜಿ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ, ಯುವರಾಜ್ ಹಾಗೂ ಯತೀಶ್ ಕರ್ಕೇರ, ಮಿಥುನ್ ಅಮೀನ್, ಅಬೂಬಕ್ಕರ್, ಸಾಯಿರಾಜ್ ಉಪಸ್ಥಿತರಿದ್ದರು.
Kshetra Samachara
25/11/2020 05:31 pm