ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ಭವನ ನಿರ್ಮಾಣ : ಪೇಜಾವರ ಶ್ರೀಗಳಿಗೆ ಯೋಗಿ ಆದಿತ್ಯನಾಥ್ ಭರವಸೆ

ಉಡುಪಿ: ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯ ಡಿಯೂರಪ್ಪನವರು ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಮುಂದೆ ತೆರಳಲಿರುವ ರಾಜ್ಯದ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ಭವ್ಯ ಕರ್ನಾಟಕ ಯಾತ್ರಿ ಭವನ ನಿರ್ಮಿಸಲು ಭೂಮಿ ಒದಗಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಸೋಮವಾರ ಯೋಗಿಯವರನ್ನು ಭೇಟಿ ಮಾಡಿದ ಪೇಜಾವರ ಶ್ರೀಗಳು ಈ ವಿಷಯವನ್ನು ಯೋಗಿಯವರ ಸ್ಮರಣೆಗೆ ತಂದಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ ಯೋಗಿಯವರು ಆದಷ್ಟು ಶೀಘ್ರ ಭೂಮಿಯನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

03/11/2020 09:05 am

Cinque Terre

5.55 K

Cinque Terre

0

ಸಂಬಂಧಿತ ಸುದ್ದಿ