ಉಡುಪಿ: ಹಿರಿಯ ವಿದ್ವಾಂಸರೂ, ಕರ್ನಾಟಕ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷರೂ ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳ ಸಂಯುಕ್ತ ಖಾಝಿಗಳೂ ಆಗಿದ್ದ, ತಾಜುಲ್ ಫುಖಹಾಅ ಖಾಝಿ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ರವರ ಪ್ರಥಮ ವಾರ್ಷಿಕ ಅನುಸ್ಮರಣಾ ಮಜ್ಲಿಸ್ ಸೆಪ್ಟೆಂಬರ್ 14 ಮಂಗಳವಾರ ಬೆಳಿಗ್ಗೆ ಗಂಟೆ 10 ರಿಂದ ಮಧ್ಯಾಹ್ನ 1.30ರ ತನಕ ಚರಿತ್ರೆ ಪ್ರಸಿದ್ದವಾದ ಮಾಲಿಕಿಬ್ನು ದೀನಾರ್ ಮಸ್ಜಿದ್ ಬಾರ್ಕೂರಿನಲ್ಲಿ ನಡೆಯಲಿದೆ.
ಸುನ್ನೀ ಸಂಯುಕ್ತ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯ ಅಧೀನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ
ಖತಮುಲ್ ಕುರ್ ಆನ್, ತಹ್ಲೀಲ್ ಸಮರ್ಪಣೆ,ಅನುಸ್ಮರಣಾ ಭಾಷಣ, ಸಾಮೂಹಿಕ ದುಆ ಮಜ್ಲಿಸ್ ಮುಂತಾದ ಕಾರ್ಯಗಳು ನಡೆಯಲಿವೆ.
ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್, ರಾಜ್ಯ ಎಸ್ ವೈ ಎಸ್ ಕಾರ್ಯದರ್ಶಿ ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ, ಅಸ್ಸಯ್ಯಿದ್ ಜುನೈದ್ ಅರ್ರಿಫಾಯೀ ತಂಙಳ್ ರಂಗಿನಕೆರೆ , ಡಿ ಕೆ ಎಸ್ ಸಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷರಾದ ಅಸ್ಸಯ್ಯಿದ್ ಮುಹಮ್ಮದ್ ತಂಙಳ್ ಜಿದ್ದಾ ಮುಂತಾದ ಉಲಮಾ,ಉಮರಾ ನಾಯಕರಾರೂ ಭಾಗವಹಿಸಲಿರುವರು ಎಂದು ಸುನ್ನೀ ಸಂಯುಕ್ತ ಜಮಾಅತ್ ಸಂಘಟನಾ ಕಾರ್ಯದರ್ಶಿ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ತಿಳಿಸಿದ್ದಾರೆ.
Kshetra Samachara
08/09/2021 09:43 pm