ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹಾಜಿ ಅಬ್ದುಲ್ಲಾ ಸಾಹೇಬ್ ಸ್ಮರಣಾರ್ಥ ಟ್ರಸ್ಟ್ ನಿಂದ ವಿವಿಧ ಕಾರ್ಯಕ್ರಮ

ಉಡುಪಿ: ಕೊಡುಗೈ ದಾನಿ,ಸಮಾಜಸೇವಕ ದಿವಂಗತ ಹಾಜಿ ಅಬ್ದುಲ್ಲಾ ಸಾಹೇಬರ ಸಂಸ್ಮರಣೆ ಇಂದು.ಅವರ ಸ್ಮರಣಾರ್ಥ ಹಾಜಿ ಅಬ್ದುಲ್ಲಾ ಟ್ರಸ್ಟ್ ಇವತ್ತು ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.ಗಿಡ ನೆಡುವ ಕಾರ್ಯಕ್ರಮ ,ಹಿರಿಯ ನಾಗರೀಕರಿಗೆ ಆಹಾರ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದವು.ಹಾರಾಡಿಯಲ್ಲಿ ಹಾಜಿ ಅಬ್ದುಲ್ಲಾ ಸಾಹೇಬರ ನೆನಪಿನಲ್ಲಿ ಐವತ್ತು ಸಸಿಗಳನ್ನು ನೆಡಲಾಯಿತು.ಅದಕ್ಕೂ ಮುನ್ನ ಬ್ರಹ್ಮಗಿರಿಯಲ್ಲಿರುವ ಹಿರಿಯ ನಾಗರಿಕರ ಕೇಂದ್ರದಲ್ಲಿ ಊಟ ವಿತರಿಸುವ ಕಾರ್ಯಕ್ರಮವೂ ಇತ್ತು‌.ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಮತ್ತು ಅಧ್ಯಕ್ಷರಾದ ಡಾ ಪಿ.ವಿ ಭಂಡಾರಿ, ಸಿರಾಜ್ ಅಹಮದ್, ಇಕ್ಬಾಲ್ ಮನ್ನಾ , ಯೋಗೇಶ್ ಶೇಟ್ ಈ ಕಾರ್ಯಕ್ರಮಗಳ ರೂವಾರಿಗಳು.

ಉಳಿದಂತೆ ಡಾ.ಎ.ವಿ.ಬಾಳಿಗಾದ ಮುಖ್ಯ ಹಣಕಾಸು ಅಧಿಕಾರಿ ಕರುಣಾಕರ್ ಶೆಟ್ಟಿ ,ಬಾಳಿಗಾ ಸಮೂಹ ಸಂಸ್ಥೆಗಳ ಸಿಬ್ಬಂದಿ ,ಹಿರಿಯ ನಾಗರಿಕರು ಜಯಶ್ರೀ, ರಾಜಾರಾಮ್ ಭಟ್, ಗೋಕುಲದಾಸ್ ಕಾಮತ್, ವಾಮನ್ ಕುಂಜತ್ತೂರು, ಪದ್ಮ ರಾಘವೇಂದ್ರ , ದಿವ್ಯಶ್ರೀ, ವೀಣಾ ನಿವೇದಿತಾ,ನಾಗರಾಜ್ ಮುಂತಾದವರು ಕಾರ್ಯಕ್ರಮಕ್ಕೆ ಕೈಜೋಡಿಸಿದರು.

Edited By : PublicNext Desk
Kshetra Samachara

Kshetra Samachara

12/08/2021 03:43 pm

Cinque Terre

1.89 K

Cinque Terre

0