ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಡಾ.ಸುಲತಾ ವಿ. ಭಂಡಾರಿ ಅವರಿಗೆ 'ಲಯನ್ಸ್ ಕನ್ನಡ ರಾಜ್ಯೋತ್ಸವ' ಪ್ರಶಸ್ತಿ ಪ್ರದಾನ

ಉಡುಪಿ: ಲಯನ್ಸ್ ಕ್ಲಬ್ ಉಡುಪಿ ವತಿಯಿಂದ ನೀಡುವ 'ಲಯನ್ಸ್ ಕನ್ನಡ ರಾಜ್ಯೋತ್ಸವ' ಪ್ರಶಸ್ತಿಯನ್ನು ಮಣಿಪಾಲ ಕೆಎಂಸಿಯ ನೇತ್ರ ತಜ್ಞೆ ಡಾ. ಸುಲತಾ ವಿ. ಭಂಡಾರಿ ಅವರಿಗೆ ಪ್ರದಾನ ಮಾಡಲಾಯಿತು.

ಲಯನ್ಸ್ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ವರ್ವಾಡಿ ಪ್ರಶಸ್ತಿ ಪ್ರದಾನ ಮಾಡಿದರು. ಮನೋವೈದ್ಯ ಡಾ. ಪಿ.ವಿ. ಭಂಡಾರಿ ಕನ್ನಡ ರಾಜ್ಯೋತ್ಸವ ಆಶಯ ಭಾಷಣ ಮಾಡಿ, ಕನ್ನಡ ಭಾಷೆ ಮಾತನಾಡುವವರು ಹೆಮ್ಮೆ ಪಡಬೇಕಾದ ಅಗತ್ಯದ ಬಗ್ಗೆ ವಿವರಿಸಿದರು.

ಹಿರಿಯ ವೈದ್ಯ, ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಡಾ.ಎ. ರವೀಂದ್ರನಾಥ ಶೆಟ್ಟಿ, ಲಯನ್ಸ್ ಕಾರ್ಯದರ್ಶಿ ಅಲೆವೂರು ದಿನೇಶ್ ಕಿಣಿ, ಕೋಶಾಧಿಕಾರಿ ಲೂಯಿಸ್ ಲೋಬೊ ಲಯನ್ಸ್ ಲೇಡಿ ಕೌನ್ಸಿಲ್ ಅಧ್ಯಕ್ಷೆ ರೂಪಾ ಡಿ. ಕಿಣಿ, ಕಾರ್ಯದರ್ಶಿ ಚಂದ್ರಿಕಾ ರವೀಶ್, ಕೋಶಾಧಿಕಾರಿ ಮಮತಾ ಶೆಟ್ಟಿ, ಲಿಯೋ ಕ್ಲಬ್ ಕೋಶಾಧಿಕಾರಿ ಅಭಿನವ್ ಕಿಣಿ ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

01/12/2020 10:03 pm

Cinque Terre

4.13 K

Cinque Terre

0