ಬೈಂದೂರು: ವಿಜಯಪುರದಲ್ಲಿ ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ-2022ರ ಪ್ರಶಸ್ತಿ ಪುರಸ್ಕಾರವು ಜೂ. 22 ರಂದು ವಿಜಯಪುರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕುಂದಾಪುರ ಸತೀಶ್ ಖಾರ್ವಿಯವರ ಅಂತರಾಷ್ಟ್ರೀಯ ಕ್ರೀಡೆ ಸಾಧನೆ ಗುರುತಿಸಿ ಸಂಭ್ರಮೋತ್ಸವ ವೇದಿಕೆಯಲ್ಲಿ ಮನಗೂಳಿ ವಿರಕ್ತಮಠದ ಶ್ರೀ ವೀರತಿಶನಂದ ಅವರಿಂದ ಕಿತ್ತೂರು ರಾಣಿ ಚೆನ್ನಮ್ಮ-2022 ರಾಜ್ಯಪ್ರಶಸ್ತಿ ಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ವಿಜಯಪುರ ಜಿಲ್ಲಾ ಅಮೇಚೂರ್ ಬಾಕ್ಸಿಂಗ್ ಸಂಸ್ಥೆಯ ಅಧ್ಯಕ್ಷ ರಾಜುಗೌಡ, ಯುವ ಕ್ರೀಡಾ ಕೆಲ್ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ, ಪತ್ರಕರ್ತ ಸಂಘದ ಅಧ್ಯಕ್ಷ ಸಂಗಮೇಶ್, ಸಂಸ್ಥೆಯ ಅಧ್ಯಕ್ಷ ಬಸವರಾಜ್ ಹಾಗೂ, ಶ್ರೀಮತಿ ತಂಗ್ಯವ್ವ, ಉಪಸ್ಥಿತರಿದ್ದರು.
Kshetra Samachara
28/06/2022 08:36 am