ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಚ್ಚು ನಾಯಿ ಕಡಿತ : ಪರ್ಕಳದಲ್ಲಿ ಭಯದ ವಾತಾವರಣ ನಿರ್ಮಾಣ!

ಪರ್ಕಳ: ಮಣಿಪಾಲ ಸಮೀಪದ ಪರ್ಕಳ, ಶೆಟ್ಟಿ ಬೆಟ್ಟು, ಹೆರ್ಗ ಪರಿಸರದಲ್ಲಿ ಹುಚ್ಚುನಾಯಿಗಳ ಹಾವಳಿ ಜೋರಾಗಿದೆ.ಇಲ್ಲಿ ಹಲವರಿಗೆ ಹುಚ್ಚು ನಾಯಿ ಕಡಿದಿದ್ದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಆದಿಉಡುಪಿ ಪರಿಸರದಲ್ಲೂ ಹಲವರಿಗೆ ಹುಚ್ಚು ನಾಯಿ ಕಡಿದಿತ್ತು.ಬಳಿಕ ಅದನ್ನು‌ ಕೊಲ್ಲಲಾಗಿತ್ತು.ಈಗ ಪರ್ಕಳ ಪರಸರದಲ್ಲೂ ಇದರ ಹಾವಳಿ ಜೋರಾಗಿದ್ದು ಸಾರ್ವಜನಿಕರು ಭಯಭೀತರಾಗಿದ್ದಾರೆ.

ನಗರಸಭೆ ಮತ್ತು ಆರೋಗ್ಯ ಇಲಾಖೆ ತಕ್ಷಣ ಇದಕ್ಕೆ ಕಡಿವಾಣ ಹಾಕುವ ಮೂಲಕ ಸಾರ್ವಜನಿಕರಿಗೆ ಆಗಬಹುದಾದ ತೊಂದರೆ ತಪ್ಪಿಸಬೇಕೆಂದು ಸ್ಥಳೀಯ ಸಮಾಜ ಸೇವಕ ಗಣೇಶ್ ರಾಜ್ ಸರಳಬೆಟ್ಟು ಒತ್ತಾಯಿಸಿದ್ದಾರೆ.

Edited By :
Kshetra Samachara

Kshetra Samachara

11/06/2022 08:40 pm

Cinque Terre

3.86 K

Cinque Terre

0

ಸಂಬಂಧಿತ ಸುದ್ದಿ