ಬೈಂದೂರು: ಸಾಗರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಬೈಂದೂರು ಇದರ ಅಧ್ಯಕ್ಷರಾಗಿ ಸತತ ಐದನೇ ಬಾರಿ ಮಾಜಿ ಸಚಿವ ಕೆ ಗೋಪಾಲ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಎಸ್. ರಾಜು ಪೂಜಾರಿ, ಕೆ. ಶಂಕರ ಪೂಜಾರಿ, ಚಿಕ್ಕು ಪೂಜಾರಿ ಶಿರೂರು, ಕಲ್ಪನಾ ಭಾಸ್ಕರ್, ಯು. ಕೇಶವ ಪೂಜಾರಿ,ಕೆ. ಶ್ರೀನಿವಾಸ ಪೂಜಾರಿ,ವೆಂಕಟೇಶ್ ಪೂಜಾರಿ,ಜಯಸೂರ್ಯ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಸಂದರ್ಭ ಸಹಕಾರ ಅಭಿವೃದ್ಧಿ ಅಧಿಕಾರಿ ಕಾರ್ಕಳ ಅರುಣ್ ಕುಮಾರ್ ಎಸ್. ವಿ ಚುನಾವಣಾಧಿಕಾರಿಯಾಗಿ ಉಪಸ್ಥಿತರಿದ್ದರು.
Kshetra Samachara
27/04/2022 06:20 am