ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು : ಮದ್ಯದ ನಶೆಯಲ್ಲಿ ಗ್ಯಾಸ್ ಟ್ಯಾಂಕರ್ ಚಾಲನೆ : ಯುವಕನ ಸಮಯಪ್ರಜ್ಞೆ ತಪ್ಪಿತು: ಬಹುದೊಡ್ಡ ದುರಂತ.

ಬೈಂದೂರು : ಮದ್ಯದ ನಶೆಯಲ್ಲಿ ಚಾಲಕನೋರ್ವ ಅತಿವೇಗ ಹಾಗೂ ಅಜಾಗ್ರತೆಯಿಂದ ಯರ್ರಾಬಿರ್ರಿಯಾಗಿ ಗ್ಯಾಸ್‌ ತುಂಬಿದ ಟ್ಯಾಂಕರ್‌ ಚಲಾಯಿಸಿದ ಪರಿಣಾಮ ತ್ರಾಸಿ - ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೆಲಹೊತ್ತು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ಹೌದು ಹುಬ್ಬಳ್ಳಿ ಕಡೆಯಿಂದ ಮಂಗಳೂರಿಗೆ ಸಾಗುತ್ತಿದ್ದ ಗ್ಯಾಸ್‌ ತುಂಬಿದ ಟ್ಯಾಂಕರ್‌ ಮಧ್ಯಾಹ್ನ ಸುಮಾರಿಗೆ ಮುಳ್ಳಿಕಟ್ಟೆ ಸಮೀಪದ ಅರಾಟೆಯಲ್ಲಿ ರಸ್ತೆ ವಿಭಾಜಕ್ಕೆ ಢಿಕ್ಕಿ ಹೊಡೆದಿದೆ.

ಮಣಿಪಾಲ ಆಸ್ಪತ್ರೆಗೆ ಕೆಲಸದ ನಿಮಿತ್ತ ಅದೇ ಮಾರ್ಗವಾಗಿ ಕಾರಿನಲ್ಲಿ ಉಡುಪಿಗೆ ತೆರಳುತ್ತಿದ್ದ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಪ್ರದೀಪ್‌ ಬಿಲ್ಲವ ಮುಳ್ಳಿಕಟ್ಟೆ ಟ್ಯಾಂಕರ್ ಅನ್ನು ಒವರ್‌ ಟೇಕ್‌ ಮಾಡಿ ನಿಲ್ಲಿಸಲು ಸೂಚಿಸಿದ್ದರೂ ಮದ್ಯದ ನಶೆಯಲ್ಲಿದ್ದ ಟ್ಯಾಂಕರ್‌ ಚಾಲಕ ಏನನ್ನೂ ಗಮನಿಸದೆ ಹಾಗೆಯೇ ಅತಿ ವೇಗವಾಗಿ ಟ್ಯಾಂಕರ್‌ ಚಲಾಯಿಸಿಕೊಂಡು ಮುಂದೆ ಸಾಗಿದ್ದಾನೆ. ರಾ.ಹೆ. 66 ರ ರಸ್ತೆ ವಿಭಾಜ ಕ್ಕೆ ಢಿಕ್ಕಿ ಹೊಡೆಯುತ್ತಾ ಮುಂದೆ ಮುಂದೆ ಸಾಗುತ್ತಿದ್ದ ಟ್ಯಾಂಕರನ್ನು ಹೆಮ್ಮಾಡಿ ಹಾಲು ಡೈರಿ ಸರ್ಕಲ್‌ ಸಮೀಪ ನಿಲ್ಲಿಸಲು ಯತ್ನಿಸಿದಾಗ ಕ್ಯಾರೆ ಎನ್ನದೇ ಮತ್ತೆ ಮುಂದೆ ಸಾಗಿದ್ದು, ಬಳಿಕ ತಲ್ಲೂರು ಸರ್ಕಲ್‌ ಬಳಿ ಬೈಕ್‌ ಸವಾರರ ನೆರವಿನೊಂದಿಗೆ ಟ್ಯಾಂಕರನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಕ್ಷಣವೇ ಪ್ರದೀಪ್‌ ಬಿಲ್ಲವ ಮುಳ್ಳಿಕಟ್ಟೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್‌ ಅವರಿಗೆ ಕರೆ ಮಾಹಿತಿ ನೀಡಿದ್ದು, ಬಳಿಕ ಕುಂದಾಪುರ ಸಂಚಾರಿ ಠಾಣೆಯ ಉಪನಿರೀಕ್ಷಕಿ ಸುಧಾ ಪ್ರಭು ಸ್ಥಳಕ್ಕೆ ಆಗಮಿಸಿ ಗ್ಯಾಸ್‌ ತುಂಬಿದ ಟ್ಯಾಂಕರನ್ನು ವಶಕ್ಕೆ ಪಡೆದು ಚಾಲಕನನ್ನು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದುರಂತ ತಪ್ಪಿಸಿದ ಯುವಕ ಈ ಹಿಂದೆಯೂ ಹಲವು ಜನಪರ ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡ ಯುವಕ ಪ್ರದೀಪ್‌ ಬಿಲ್ಲವ ಮುಳ್ಳಿಕಟ್ಟೆ ಯವರ, ತಾಳ್ಮೆ ಹಾಗೂ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾದ ಬಹುದೊಡ್ಡ ದುರಂತವೊಂದು ತಪ್ಪಿ ಹೋಗಿದ್ದು ಇದೀಗ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಯುವಕನ ಕಾರ್ಯಸಾಧನೆ ಗಮನಿಸಿ ಸಾರ್ವಜನಿಕರು ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

22/04/2022 10:34 pm

Cinque Terre

2.14 K

Cinque Terre

1

ಸಂಬಂಧಿತ ಸುದ್ದಿ