ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಕೇಂದ್ರದ ಆರ್ಥಿಕ ನೀತಿಗಳೇ ಬೆಲೆ ಏರಿಕೆಗೆ ಕಾರಣ: ಚಾಲಕರ ಪ್ರತಿಭಟನೆಯಲ್ಲಿ ಆಕ್ರೋಶ.

ಕುಂದಾಪುರ: ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕರೋನ, , ರಷ್ಯಾ-ಯುಕ್ರೇನ್ ಯುದ್ಧ ಕಾರಣವಲ್ಲ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಆರ್ಥಿಕ ನೀತಿಗಳು ಕಾರಣ ಎಂದು ಸಿಐಟಿಯು ತಾಲೂಕು ಸಂಚಾಲಕರಾದ ಎಚ್. ನರಸಿಂಹ ಹೇಳಿದರು.

ಕುಂದಾಪುರ ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು) ರಾಷ್ಟ್ರ ವ್ಯಾಪಿ ಹಮ್ಮಿಕೊಂಡ ಹೋರಾಟದ ಅಂಗವಾಗಿ ಶಾಸ್ತ್ರಿ ವ್ರತ್ತದಲ್ಲಿ ನಡೆದ ಪ್ರತಿಭಟನೆ ಯಲ್ಲಿ ಮಾತನಾಡಿದರು.

ಜನರ ಸಮಸ್ಯೆಗಳನ್ನು ಬಗೆಹರಿಸಲಾಗದ ಆಡಳಿತ ವೈಫಲ್ಯಕ್ಕೆ ಬಿಜೆಪಿ ನೇತ್ರತ್ವದ ಸರಕಾರ ಒಂದೊಂದು ಕುಂಟು ನೆಪ, ಸುಳ್ಳುಗಳನ್ನೇ ಹೇಳುತ್ತಾ ಅಧಿಕಾರ ನಡೆಸುತ್ತಾ ತೆರಿಗೆಗಳನ್ನು ಸಂಗ್ರಹಿಸಿ ಬಡ ಚಾಲಕರ ಬದುಕನ್ನು ದುಸ್ಥಿತಿಗೆ ದೂಡುತ್ತಿದೆ.ತೈಲ, ಗ್ಯಾಸ್ ಬೆಲೆ ಏರಿಕೆಯನ್ನು ಮರೆಮಾಚಲು ಜನರನ್ನು ಧರ್ಮದ ವಿಚಾರಗಳನ್ನು ಮುನ್ನಲೆಗೆ ತರುತ್ತಿರುವುದು ಅಪಾಯಕಾರಿ ಎಂದು ಹೇಳಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ; ರಿಕ್ಷಾ ಚಾಲಕರು ಹಗಲು ರಾತ್ರಿ ದುಡಿದ ಆದಾಯವನ್ನು ಬಿಜೆಪಿ ನೇತ್ರತ್ವದ ಕೇಂದ್ರ ಸರ್ಕಾರದ ಬೊಕ್ಕಸ ತುಂಬಿಸುತ್ತಿದ್ದಾರೆ.ಚಾಲಕರು ತೈಲ ಬೆಲೆ ಏರಿಕೆ ವಿರುದ್ಧ ಮಾತನಾಡದದಿದ್ದರೆ ಅವರು ಕುಟುಂಬ ನಿರ್ವಹಿಸಲು ಸಾಧ್ಯವಾಗದೇ ಬೀದಿಗೆ ಬೀಳುವ ಎಲ್ಲಾ ಅಪಾಯಗಳಿವೆ.ಸರ್ಕಾರವು ಕೂಡಲೇ ಏರಿಸಿದ ಗ್ಯಾಸ್, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಹಿಂಪಡೆಯಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರಿಕ್ಷಾ ಚಾಲಕರ ಮುಖಂಡರಾದ ಚಂದ್ರಶೇಖರ ವಿ ಮಾತನಾಡಿ ವಂದನೆ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಅಧ್ಯಕ್ಷರಾದ ಲಕ್ಷ್ಮಣ ಬರೇಕಟ್ಟು, ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ, ರಮೇಶ್ ವಿ.ಉಮೇಶ ಶೇರಿಗಾರ್, ನರಸಿಂಹ ಪೂಜಾರಿ, ರವಿ ವಿಎಂ, ಮೊದಲಾದವರಿದ್ದರು.

ಕುಂದಾಪುರ ತಹಸಿಲ್ದಾರ್ ಕಿರಣ್ ಗೋರಯ್ಯ ಅವರ ಮೂಲಕ ಸರ್ಕಾರಕ್ಕೆ ಮನವಿಯನ್ನು ನೀಡಲಾಯಿತು.

Edited By : PublicNext Desk
Kshetra Samachara

Kshetra Samachara

20/04/2022 04:46 pm

Cinque Terre

1.39 K

Cinque Terre

0

ಸಂಬಂಧಿತ ಸುದ್ದಿ