ಉಡುಪಿ: ಅಯೋಧ್ಯೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸಭೆಯು ಅಯೋಧ್ಯೆಯಲ್ಲಿ ನಿನ್ನೆ ನಡೆಯಿತು. ಸಭೆಯಲ್ಲಿ ಟ್ರಸ್ಟ್ ನ ವಿಶ್ವಸ್ಥರಾದ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಭಾಗವಹಿಸಿದರು. ಅದಕ್ಕೂ ಮೊದಲು ತಾತ್ಕಾಲಿಕ ಮಂದಿರದಲ್ಲಿರುವ ರಾಮಲಲ್ಲಾನ ದರ್ಶನ ಪಡೆದು ಚಾಮರಸೇವೆ , ಮಂಗಳಾರತಿ ಬೆಳಗಿ ದೇಶದ ಕ್ಷೇಮ ಸುಭಿಕ್ಷೆ ಶಾಂತಿಗೆ ಪ್ರಾರ್ಥಿಸಿದರು. ಬಳಿಕ ಮಂದಿರ ನಿರ್ಮಾಣ ಸ್ಥಳಕ್ಕೆ ತೆರಳಿ ಕಾರ್ಮಿಕರೊಂದಿಗೆ ಉಭಯ ಕುಶಲೋಪರಿ ನಡೆಸಿ ಉತ್ಸಾಹ ತುಂಬಿದರು.
ಶ್ರೀರಾಮ ಮತ್ತು ಹನುಮಂತನ ಅನುಗ್ರಹದಿಂದಾಗಿ ಜಗತ್ತಿನ ಎಲ್ಲೆಡೆ ಶಾಂತಿ ಸುಭಿಕ್ಷೆ ನೆಲೆಸಲಿ ಎಂದು ರಾಮ ದೇವರನ್ನು ಪ್ರಾರ್ಥಿಸಿದ್ದಾಗಿ ಪೇಜಾವರ ಶ್ರೀಗಳು ಹೇಳಿದರು.
Kshetra Samachara
20/04/2022 12:28 pm