ಕುಂದಾಪುರ: ಪ್ರಸಾದ್ ನೇತ್ರಾಲಯ ಸೂಪರ್ ಸ್ಫೆಷಾಲಿಟಿ ಹಾಸ್ಪಿಟಲ್ ಉಡುಪಿ, ಫಾರ್ಚೂನ್ ಗ್ರೂಫ್ ಆಫ್ ಹೋಟೇಲ್ಸ್, ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಹಾಗೂ ಕಾರ್ಲ್ ಜೈಸ್ ಇಂಡಿಯಾ ಫ್ರೈವೆಟ್ ಲಿಮಿಟೆಡ್,ಅಲೋಕಾ ವಿಷನ್ ಪ್ರೋಗ್ರಾಂ ಇವರ ಜಂಟಿ ಆಶ್ರಯದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ವಕ್ವಾಡಿ ಫಾರ್ಚೂನ್ ವಿಲೇಜ್ ಹೋಟೆಲ್ ಸಭಾಂಗಣದಲ್ಲಿ ಇಂದು ನಡೆಯಿತು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಸಾಂಕೇತಿಕವಾಗಿ ಕನ್ನಡಕ ವಿತರಿಸಿ ಮಾತನಾಡಿ, ಹಣ ಇದ್ದವರಲ್ಲಿ ದಾನ ಮಾಡುವ ಗುಣಗಳು ಕಮ್ಮಿ ಇರುವುದು ದೇಶದ ದೌರ್ಭಾಗ್ಯ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳಷ್ಟು ಹಣವಂತರಿದ್ದು ಅವರ ಪೈಕಿ ಒಂದಷ್ಟು ಮಂದಿಗಾದರೂ ಪ್ರವೀಣ್ ಶೆಟ್ಟಿಯವರಂತೆ ದಾನ ಮಾಡಿದರೆ ಆತ್ಮತ್ರಪ್ತಿ ಸಿಗುತ್ತದೆ. ನಾವಿಬ್ಬರು ಬಹಳಷ್ಟು ವರ್ಷದ ಸ್ನೇಹಿತರು. ಅವರಿಂದ ಹುಟ್ಟೂರಿಗೆ ಹತ್ತಾರು ಅಭಿವ್ರದ್ಧಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಸಂಪಾದನೆ ಒಂದಷ್ಟು ಭಾಗವನ್ನು ಜನಹಿತಕ್ಕೆ ನೀಡುವ ತುಡಿತ ನಿಜಕ್ಕೂ ಶ್ಲಾಘನೀಯ ಎಂದರು.
Kshetra Samachara
08/04/2022 06:37 am