ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪ್ರೊಫೆಸರ್ ಮೇಟಿ ಮುದಿಯಪ್ಪ ಅವರಿಗೆ ನುಡಿನಮನ

ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಸಂಸ್ಥೆಗಳ ವತಿಯಿಂದ ಪ್ರೊ. ಮೇಟಿ ಮುದಿಯಪ್ಪ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಉಡುಪಿಯ ರಂಗವಲ್ಲಿ ನಡೆಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಎಚ್.ಪಿ ಅವರು ಮಾತನಾಡುತ್ತಾ ನಮ್ಮನ್ನಗಲಿದ ಮೇಟಿ ಅವರು ಸಂಘಟಕ, ಕಲಾವಿದ ,ಸಾಹಿತಿ ಹೀಗೆ ಹಲವು ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು ಸಮಾಜದಲ್ಲಿ ಜನಾನುರಾಗಿಯಾಗಿದ್ದರು. ಅವರ ಅಗಲುವಿಕೆ ಸಾಹಿತ್ಯಲೋಕಕ್ಕೆ ತುಂಬಲಾರದ ನಷ್ಟ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಗೌರವಾಧ್ಯಕ್ಷ ವಿಶ್ವನಾಥ್ ಶೆಣಿೈ, ಪ್ರಧಾನ ಕಾರ್ಯದರ್ಶಿ ಗಿರೀಶ್ ತಂತ್ರಿ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿ ಪೂರ್ಣಿಮ ಜನಾರ್ಧನ್, ಜಯರಾಮ ಆಚಾರ್ಯ, ಹಫೀಜ್ ರೆಹಮಾನ್, ರಾಘವೇಂದ್ರ ಪ್ರಭು ಕರ್ವಾಲು ,ನರಸಿಂಹಮೂರ್ತಿ, ಸುಭೋದ್ ,ಸುಶಾಂತ್ ಕೆರೆಮಠ, ರೂಪಶ್ರೀ, ಸಿ ಎಸ್ ರಾವ್, ಸೋಮನಾಥ್ ಚಿಟ್ಪಾಡಿ ,ವೀರಣ್ಣ ಕುರುವತ್ತಿ ಗೌಡ ಮತ್ತಿತರರು ಉಪಸ್ಥಿತರಿದ್ದರು.

ತಾಲೂಕು ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ನಿರೂಪಿಸಿದರು. ಕೋಶಾಧ್ಯಕ್ಷರಾದ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು.

Edited By : PublicNext Desk
Kshetra Samachara

Kshetra Samachara

19/03/2022 08:51 pm

Cinque Terre

1.29 K

Cinque Terre

0

ಸಂಬಂಧಿತ ಸುದ್ದಿ