ಉಡುಪಿ:ಮದ್ಯ ವ್ಯಸನಿಯಾದ ಯುವಕನೋರ್ವ ದಾಂಧಲೆ ನಡೆಸಿ ಮನೆ ಮಂದಿಗೆ ತೀವ್ರ ಹಲ್ಲೆ ನಡೆಸಿದ ವ್ಯಕ್ತಿಯನ್ನು ಉಡುಪಿ ಮಹಿಳಾ ಠಾಣಾ ಪೊಲೀಸ್ ಸಹಾಯದಿಂದ ವಿಶು ಶೆಟ್ಟಿ ಅಂಬಲಪಾಡಿಯವರು ವಶಕ್ಕೆ ಪಡೆದು ಕಾರ್ಕಳ ಪಳ್ಳಿಯ ಸ್ಪಂದನ ಮದ್ಯ ವರ್ಜನ ಶಿಬಿರ ಕೇಂದ್ರಕ್ಕೆ ದಾಖಲಿಸಿದ ಘಟನೆ ನಡೆದಿದೆ.
ವ್ಯಕ್ತಿ ವಿಪರೀತ ಕುಡಿತದಿಂದ ಮಾರಕಾಯುಧಗಳಿಂದ ಹಲ್ಲೆ ನಡೆಸಲು ಮುಂದಾಗಿದ್ದು ಭಯದ ವಾತಾವರಣ ಸೃಷ್ಟಿಸಿದ್ದ. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವ್ಯಕ್ತಿಯು ವಿಪರೀತ ಕುಡಿತದ ಚಟಕ್ಕೆ ಬಲಿಯಾಗಿದ್ದು ಈ ಹಿಂದೆಯೂ ಬಹಳಷ್ಟು ಹಿಂಸೆ ನೀಡುತ್ತಿದ್ದು, ರಕ್ಷಣೆಗಾಗಿ ಮನೆಯವರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Kshetra Samachara
01/12/2021 09:45 am