ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ ಪೋಸ್ಟರ್ ತಯಾರಿಸುವ ಸ್ಪರ್ಧೆ

ಉಡುಪಿ: ಸಾಂಕ್ರಾಮಿಕ ರೋಗವು ಕೈತೊಳೆಯುವಿಕೆಯನ್ನು ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣದಲ್ಲಿ ಅತ್ಯಂತ ಸರಳವಾದ ಹಾಗೂ ಒಂದು ಪ್ರಮುಖ ಕ್ರಮವೆಂದು ಎತ್ತಿ ತೋರಿಸಿದೆ. ಅಕ್ಟೋಬರ್ 15 ರಂದು ಆಚರಿಸಲಾಗುವ ವಿಶ್ವ ಕೈತೊಳೆಯುವ ದಿನಾಚರಣೆಯ ಸಂದರ್ಭದಲ್ಲಿ, ಉಡುಪಿ ಜಿಲ್ಲೆಯ ಡಾ.ಟಿಎಂಎ ಪೈ ಆಸ್ಪತ್ರೆಯು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ (8 ರಿಂದ 10 ನೇ ತರಗತಿ) ಪೋಸ್ಟರ್ ತಯಾರಿಕೆ ಸ್ಪರ್ಧೆಯನ್ನು ಆಯೋಜಿಸಿದೆ.

ಪೋಸ್ಟರ್ ಸ್ಪರ್ಧೆಯ ವಿಷಯವು "ನಮ್ಮ ಭವಿಷ್ಯವು ನಮ್ಮ ಕೈಯಲ್ಲಿದೆ - ಒಟ್ಟಿಗೆ ಸಾಗೋಣ".  ಮೂಲ ಪ್ರತಿಯನ್ನು ಭಾಗವಹಿಸುವವರ ಹೆಸರು, ವಯಸ್ಸು ಮತ್ತು ಸಂಪರ್ಕ ವಿವರಗಳೊಂದಿಗೆ, 12 ಅಕ್ಟೋಬರ್ 2021 ರ ಒಳಗೆ, A3 ಸೈಜ್ ನಲ್ಲಿ office.tmaph@manipal.edu ಗೆ ಇ-ಮೇಲ್ ಮಾಡಬೇಕು.

ಅತ್ಯುತ್ತಮ 3 ಪೋಸ್ಟರ್‌ಗಳಿಗೆ ನಗದು ಬಹುಮಾನ ನೀಡಲಾಗುವುದು ಮತ್ತು ಭಾಗವಹಿಸುವವರೆಲ್ಲರಿಗೂ ಇ-ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

10/10/2021 02:19 pm

Cinque Terre

1.62 K

Cinque Terre

0

ಸಂಬಂಧಿತ ಸುದ್ದಿ