ಉಡುಪಿ: ಇಂದು ಪ್ರಧಾನಿ ನರೇಂದ್ರ ಮೋದಿಯವರು 71ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ 80 ಸಾವಿರ ಜನಕ್ಕೆ ಕೊರೋನಾ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಇನ್ನೊಂದು ವಿಶೇಷ ಎಂದರೆ ಕಡಿಯಾಳಿಯ
ಲಸಿಕೆ ಕೇಂದ್ರದಲ್ಲಿ ಮೋದಿ ಅಭಿಮಾನಿಗಳು ಪಾಯಸ ವಿತರಣೆ ಮಾಡುತ್ತಿದ್ದಾರೆ.
ಉಡುಪಿಯ ಕಡಿಯಾಳಿ ಕಮಲಾಬಾಯಿ ಹೈಸ್ಕೂಲಿನಲ್ಲಿ ಲಸಿಕೆ ಕೇಂದ್ರದ ಹೊರಗಡೆ ಪಾಯಸ ವಿತರಣೆ ಮಾಡಲಾಗುತ್ತಿದ್ದು ಜನರು ಪಾಯಸದ ರುಚಿ ಸವಿದರು.ಮೋದಿ ಹುಟ್ಟುಹಬ್ಬದಂದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ರಾಘವೇಂದ್ರ ಕಿಣಿ ಕುಟುಂಬದಿಂದ ಉಚಿತ ಪಾಯಸ ವಿತರಣೆ ಮಾಡುವ ಕಾರ್ಯ
ಕಳೆದ ಆರು ವರ್ಷಗಳಿಂದಲೂ ನಡೆಯುತ್ತಿದೆ.
Kshetra Samachara
17/09/2021 02:36 pm