ಉಡುಪಿ:ಸೌತ್ ಕೆನರಾ ಫೋಟೊಗ್ರಾಫರ್ಸ್ ಎಸೋಸಿಯೇಷನ್(ರಿ.) ಉಡುಪಿ ವಲಯ ವತಿಯಿಂದ ವಿಶ್ವ ಛಾಯಾಗ್ರಹಣ ದಿನ ಆಚರಿಸಲಾಯಿತು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಬಡಗುಬೆಟ್ಟು ಕೋ.ಸೊಸೈಟಿ ಇದರ ಪ್ರಧಾನ ವ್ಯವಸ್ಥಾಪಕರು ಜಯಕರ ಶೆಟ್ಟಿ ಇಂದ್ರಾಳಿ ಫೋಟೋಗ್ರಾಪರ್ಸ್ ಗೆ ಸರಕಾರದಿಂದ ಸಿಗುವ ಸವಲತ್ತಿಗೆ ಹೋರಾಟ ಅತಿ ಮುಖ್ಯ ಎಂದು ಹೇಳಿದರು.ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಸುಂದರ ಪೂಜಾರಿ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಹಫೀಝ್ ರೆಹಮಾನ್,ಪೊರ್ಲು ಸ್ಟುಡಿಯೋ ಕಾರ್ಕಳ ಜಿನೇಶ್ ಪ್ರಸಾದ್ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಉಡುಪಿ ವಲಯದ ಅಧ್ಯಕ್ಷರಾದ ಪ್ರಕಾಶ್ ಕೋಡಂಕೂರು, ಸಮಾಜ ಸೇವಕರಾದ ವಿಶ್ವನಾಥ್ ಪೂಜಾರಿ, ಎಸ್.ಕೆ.ಪಿ.ಯ ಜಿಲ್ಲಾ ಅಧ್ಯಕ್ಷರಾದ ಕರಂದಾಡಿ ಶ್ರೀಧರ್ ಶೆಟ್ಟಿಗಾರ್,ಮಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು,ಸುಂದರ್ ಪೂಜಾರಿ,ಪ್ರಸಾದ್ ಜತ್ತನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಾಘವೇಂದ್ರ ಶೇರಿಗಾರ್ ನಿರೂಪಿಸಿ ಸುಕೇಶ್ ಅಮೀನ್ ವಂದಿಸಿದರು.
Kshetra Samachara
19/08/2021 01:13 pm