ಉದ್ಯಾವರ : ದೇಶದಲ್ಲಿ ತಾಂಡವವಾಡುತ್ತಿರುವ ಪರ ಧರ್ಮ ಅಸಹನೆ, ಕೋಮುವಾದಕ್ಕೆ ಪರಿಹಾರ ಗಾಂಧಿವಾದವೇ ವಿನಃ ಬೇರೆ ಯಾವುದೂ ಅಲ್ಲ.
ಗಾಂಧಿ ತೋರಿದ ದಾರಿಯಲ್ಲಿ ನಮಗೆ ನಡೆಯಲು ಸಾಧ್ಯವಾದರೆ ಮಾತ್ರ ಗಾಂಧಿ ಕಂಡ ಕನಸಿನ ಭಾರತ ನಿರ್ಮಾಣವಾಗಿ ದೇಶ ಸಮಗ್ರತೆಯಿಂದ ಇದ್ದು ಅಭಿವೃದ್ಧಿ ಹೊಂದಬಹುದು ಎಂದು ಹಿರಿಯ ಕಾಂಗ್ರೆಸ್ಸಿಗ ಉದ್ಯಾವರ ನಾಗೇಶ್ ಕುಮಾರ್ ಹೇಳಿದರು.
ಅವರು ಉದ್ಯಾವರದಲ್ಲಿ ನಡೆದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಾಂಧಿ ವಾದ ಬಿಟ್ಟರೆ ದೇಶಕ್ಕೆ ಭವಿಷ್ಯವಿಲ್ಲ. ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧೀಜಿಯವರ ಉಪವಾಸದ ಕಲ್ಪನೆಯಾಗಿರಲಿ, ಒಂದು ಹಿಡಿ ಉಪ್ಪನ್ನು ಎತ್ತಿ ಹಿಡಿದದ್ದಾಗಲಿ ಇದು ಒಂದು ಮಗುವಿನ ಕ್ರಿಯೆ. ತಾಯಿಯಲ್ಲಿ, ಮಗು 'ನೀನು ಕೊಡದಿದ್ದರೆ ನಾನು ಬಿಡೆ' ಎನ್ನುವ ಹಟ ಇದೆಯಲ್ಲ ಅದನ್ನು ನಾವು ಕಾಣಬಹುದು.
ಅದೇ ಮುಂದೆ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಲು ಕಾರಣವಾಯಿತು ಎಂಬುದನ್ನು ನಾವು ಮರೆಯಬಾರದು ಎಂದರು.
ಪಕ್ಷದ ನಾನಾ ಮುಖಂಡರು, ಕಾರ್ಯ ಕರ್ತರು ಉಪಸ್ಥಿತರಿದ್ದರು.
Kshetra Samachara
02/10/2020 09:35 pm