ಕುಂದಾಪುರ: ಹೊಸ ಚಾಲಕ, ಹೊಸ ನಿರ್ವಾಹಕ, ಕನಿಷ್ಟ ದುರಸ್ತಿ ಸಲಕರಣೆಗಳಿಲ್ಲದ ಖಾಸಗೀ ಬೆಂಗಳೂರು ಕುಂದಾಪುರ ಬಸ್ಸುಗಳು ಕೆಟ್ಟು ನಿಂತರೆ ಪ್ರಯಾಣಿಕರ ಗೋಳು ಹೇಳತೀರದಾಗಿದೆ ಎಂದು ಪ್ರಯಾಣಿಕ ರಾಘವೇಂದ್ರ ಹಾರ್ಮಣ್ ಅಳಲು ತೋಡಿಕೊಂಡಿದ್ದಾರೆ.
ಮಂಗಳವಾರ ರಾತ್ರಿ ರಾಘವೇಂದ್ರ ಅವರು ಬೆಂಗಳೂರಿನಿಂದ ಕಂದಾಪುರಕ್ಕೆ ಶ್ರೀ ಸಾಯಿ ಹೆಸರಿನ ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ. "ಬೆಳಿಗ್ಗೆ 4 ಗಂಟೆಗೆ ಗುಂಡ್ಯ ಹತ್ತಿರ ಬಸ್ಸಿನ ಮುಂದಿನ ಟೈಯರ್ ಪಂಚರ್ ಆಯಿತು, ಆದರೆ ಬಸ್ಸಿನಲ್ಲಿ ಸಂಬಂಧಿಸಿದ ಯಾವುದೇ ಉಪಕರಣಗಳು ಇರಲಿಲ್ಲ ಹೋಗಲಿ, ಬೇರೆ ಬಸ್ ವ್ಯವಸ್ಥೆ ಮಾಡಲೂ ಇಲ್ಲ, ಡ್ರೈವರ್, ಕ್ಲೀನರ್ ಇಬ್ಬರೂ ಹೊಸಬರು. ಪಾಪ ಡ್ರೈವರ್ ಒಬ್ಬರು ಒದ್ದಾಟ ಮಾಡಿ ಬೇರೆ ಬೇರೆ ಪರಿಚಯದ ಬಸ್ಸಿನವರಿಂದ ಉಪಕರಣಗಳನ್ನು ಪಡೆದು ಬೆಳಿಗ್ಗೆ 7 ಗಂಟೆಗೆ ಸರಿ ಮಾಡಲಾಯತು. ಬಸ್ ಹೊರಡಬೇಕೆನ್ನುವಾಗ ಮಳೆ ಬರ್ತಾ ಇತ್ತು ವೈಫರ್ ಸರಿ ಇಲ್ಲ ಅಲ್ಲಿ ಇಲ್ಲಿ ನಿಲ್ಲಿಸಿ ಕೊಂಡು ಕುಂದಾಪುರ ಬರುವಾಗ ಮಧ್ಯಾಹ್ನ 11 ಗಂಟೆ.! ಬಸ್ ಮಾಲಿಕರು ಫೋನ್ ಎತ್ತಿಲ್ಲ... ಎಂದು ಪಬ್ಲಿಕ್ ನೆಕ್ಸ್ಟ್ ಜೊತೆ ಅಳಲು ತೋಡಿಕೊಂಡಿದ್ದಾರೆ.
ಬಸ್ ವ್ಯವಸ್ಥೆ ಸರಿಯಾಗಿರಲಿಲ್ಲ. ಪುಟ್ಟ ಮಕ್ಕಳು, ಶುಗರ್. ಬಿಪಿ ಅಂತಹ ಅನಾರೋಗ್ಯದವರು,ವಯಸ್ಸಾದವರು ಬಸ್ಸಿನಲ್ಲಿದ್ದರು. ಬಸ್ ಮಾಲಕರ ನಿರ್ಲಕ್ಷ್ಯಕ್ಕೆ ಯಾರು ಜವಾಬ್ಧಾರಿ ಎಂದು ಪ್ರಶ್ನಿಸಿದ್ದಾರೆ.
Kshetra Samachara
14/09/2022 03:33 pm