ಉಡುಪಿಯ ಕಾರ್ಕಳದಲ್ಲಿ ಬಲು ಅಪರೂಪದ ಜೋಡಿಯ ಮದುವೆ ನಡೆದಿದೆ. ಈ ಮದುವೆಗೆ ಬಂದವರಿಗೆ ತಕ್ಷಣಕ್ಕೆ ಇದು ಬಾಲ್ಯ ವಿವಾಹದಂತೆ ಭಾಸವಾದರೂ, ಇದು ಬಾಲ್ಯ ವಿವಾಹ ಅಲ್ಲ. ಕುಳ್ಳ ದೇಹದ ಜೋಡಿ ಸತಿಪತಿಗಳಾಗಿ ವೈವಾಹಿಕ ಜೀವನ ಆರಂಭಿಸಿದ್ದಾರೆ.
ವರನ ಎತ್ತರ 4 ಅಡಿ. ವಧುವಿನ ಎತ್ತರವೂ ಅಷ್ಟೇ. ವಧು ಹಿರಿಯಡ್ಕ ನಿವಾಸಿ ಶ್ರೀಕೃತಿ. ವರನ ಹೆಸರು ಹರ್ಷಿತ್ ಕುಮಾರ್. ಕಾರ್ಕಳ ತಾಲೂಕಿನ ಜೋಡುರಸ್ತೆಯ ಕುಲಾಲ ಸಭಾಭವನದಲ್ಲಿ ಈ ಅಪರೂಪದ ಜೋಡಿಯ ಮದುವೆ ನಡೆಯಿತು. ನೆಂಟರಿಷ್ಟರು, ಸ್ನೇಹಿತರು ಮದುವೆಗೆ ಆಗಮಿಸಿ ವಿಶೇಷ ಜೋಡಿಯನ್ನು ಹರಿಸಿದರು.
PublicNext
08/06/2022 07:18 pm