ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾರ್ಕೂರು: ವೇಣುಗೋಪಾಲಕೃಷ್ಣ ದೇವಳದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಬ್ರಹ್ಮಾವರ : ಬಾರ್ಕೂರು ಮೂಡುಕೇರಿ ವೇಣುಗೋಪಾಲಕೃಷ್ಣ ದೇವಸ್ಥಾನಕ್ಕೆ ಆಗಮಿಸುವ ಮುಖ್ಯದ್ವಾರದಿಂದ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಕುರುಚಲು ಗಿಡಗಳ ಕಟಾವು ಹಾಗೂ ದೇವಸ್ಥಾನದ ಅಕ್ಕಪಕ್ಕದಲ್ಲಿ ಮತ್ತು ದೇವಳದ ಸುತ್ತು ಪೌಳಿ ಸ್ವಚ್ಛ ಮಾಡುವ ಕಾರ್ಯಕ್ರಮ ಇಂದು ಜರುಗಿತು.

ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಕೋಟ, ಬಾರ್ಕೂರು, ಬ್ರಹ್ಮಾವರ, ಕೆಮ್ಮಣ್ಣು, ತೆಂಕನಿಡಿಯೂರು, ಉಡುಪಿ, ಉದ್ಯಾವರ ವಲಯಗಳು ಹಾಗೂ ವೇಣುಗೋಪಾಲಕೃಷ್ಣ ಯುವಕ ಸಂಘ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಶ್ರದ್ಧಾಭಕ್ತಿಯಿಂದ ಶ್ರಮದಾನ ಮಾಡಿದ ಎಲ್ಲರಿಗೂ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಸೂರ್ಯನಾರಾಯಣ ಗಾಣಿಗ ಮಟಪಾಡಿ, ಪ್ರಧಾನ ಕಾರ್ಯದರ್ಶಿ ನಾಗರಾಜ್ ಸಾಲಿಗ್ರಾಮ, ಉಪಾಧ್ಯಕ್ಷ ಸೇವಧಿ ಸುರೇಶ್ ದೇವಳದ ವತಿಯಿಂದ ಧನ್ಯವಾದ ತಿಳಿಸಿದರು.

Edited By : PublicNext Desk
Kshetra Samachara

Kshetra Samachara

27/09/2022 09:57 pm

Cinque Terre

1.71 K

Cinque Terre

0

ಸಂಬಂಧಿತ ಸುದ್ದಿ