ನಾವು ಈತನಕ ಅಣ್ಣತಮ್ಮಂದಿರಂತೆ ಅನ್ಯೋನ್ಯವಾಗಿ ವ್ಯಾಪಾರ ನಡೆಸುತ್ತಿದ್ದೇವೆ.ಆದರೆ ಬೇರೆ ಬೇರೆ ಕಾರಣಗಳಿಂದ ಮುಸ್ಲಿಮರಿಗೆ ಹಿಂದೂಗಳ ಜಾತ್ರೆಗಳಲ್ಲಿ ವ್ಯಾಪಾರ ನಡೆಸಲು ಅನುಮತಿ ನಿರಾಕರಿಸಲಾಗಿದ್ದು ಈ ಬೆಳವಣಿಗೆ ಸರಿ ಅಲ್ಲ ಎಂದು ಬೀದಿ ವ್ಯಾಪಾರಿ ಗಜೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾನು ಬಹಳ ವರ್ಷಗಳಿಂದಲೂ ಮುಸಲ್ಮಾನರ ಜೊತೆ ವ್ಯಾಪಾರ ನಡೆಸುತ್ತಿದ್ದೇನೆ.ಅವರಿಂದ ಯಾವುದೇ ಸಮಸ್ಯೆಗಳೂ ಆಗಿಲ್ಲ.ಇನ್ನು ಮುಂದೆಯೂ ಅಂತಹದ್ದೇ ವಾತಾವರಣ ನಿರ್ಮಾಣವಾಗಬೇಕು.ಅವರನ್ನು ಜಾತ್ರೆಗಳಲ್ಲಿ ವ್ಯಾಪಾರ ನಡೆಸದಂತೆ ತಡೆಯುವುದು ಸರಿಯಲ್ಲ ಎಂದು ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿದ್ದಾರೆ.
Kshetra Samachara
21/03/2022 05:30 pm