ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟಪಾಡಿ ನೇಕಾರನ ನೋವಿಗೆ ಸ್ಪಂದಿಸಿದ ಸಚಿವೆ ಸ್ಮೃತಿ ಇರಾನಿ

ಕಟಪಾಡಿ : ಪ್ರವಾಹದಿಂದಾಗಿ ಕಟಪಾಡಿ ಮಟ್ಟುವಿನ ಕೈಮಗ್ಗದ ನೇಕಾರ ಲಕ್ಷ್ಮಣ್ ಶೆಟ್ಟಿಗಾರ್ ಅವರ ಕೈಮಗ್ಗದ ತ್ರೆಡ್ ಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿರುವ ಕುರಿತು ಹರಿದಾಡಿದ ವಿಡಿಯೋ ತುಣುಕನ್ನು ಗಮನಿಸಿದ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರತಿಕ್ರಿಯೆ ನೀಡಿದ್ದಾರೆ.

ಲಕ್ಷ್ಮಣ್ ಶೆಟ್ಟಿಗಾರ್ ಕುಟುಂಬಕ್ಕೆ ತಕ್ಷಣ ನೆರವು ನೀಡುವಂತೆ ಕೇಂದ್ರ ಸರಕಾರದ ಟೆಕ್ಸ್ ಟೈಲ್ ಇಲಾಖೆಯ ಅಧೀನದಲ್ಲಿರುವ ಬೆಂಗಳೂರು ನೇಕಾರರ ಸೇವಾ ಕೇಂದ್ರಕ್ಕೆ ನಿರ್ದೇಶನ ನೀಡಿದ್ದಾರೆ.

ಅದರಂತೆ ಬೆಂಗಳೂರಿನಿಂದ ಶೆಟ್ಟಿಗಾರ್ ಮನೆಗೆ ಆಗಮಿಸಿದ ಸೇವಾ ಕೇಂದ್ರದ ಅಧಿಕಾರಿಗಳು, ಹಾನಿಯ ಬಗ್ಗೆ ಪರಿಶೀಲನೆ ನಡೆಸಿದ್ದು, ಕೈಮಗ್ಗಕ್ಕೆ ಅನುಕೂಲವಾಗುವಂತೆ ಮನೆ ಸಮೀಪ ಶೆಡ್ ನಿರ್ಮಿಸಲು 1.20ಲಕ್ಷ ರೂ. ಅನುದಾನವನ್ನು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಕೈಮಗ್ಗದ ಸಹಕಾರಿ ಸಂಘದ ವತಿಯಿಂದಲೂ ಶೆಟ್ಟಿಗಾರ್ ಕುಟುಂಬಕ್ಕೆ ತುರ್ತು ಪರಿಹಾರ ನೀಡಲಾಗಿದೆ. ಹಲವು ಮಂದಿ ದಾನಿಗಳು ನೆರವು ಒದಗಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

28/09/2020 07:23 pm

Cinque Terre

17.39 K

Cinque Terre

0

ಸಂಬಂಧಿತ ಸುದ್ದಿ