ಮಲ್ಪೆ: ಕರಾವಳಿಯಲ್ಲಿ ಬಿಸಿಲ ಬೇಗೆ ಏರುತ್ತಿದೆ. ಲಾಕ್ ಡೌನ್ ಮತ್ತು ಕೊರೊನಾ ಕಾರಣದಿಂದ ಮನೆಯಲ್ಲೇ ಕುಳಿತ ಜನ ಅದರಿಂದ ಬೇಸತ್ತು ಉಡುಪಿಯ ಪ್ರಸಿದ್ಧ ಮಲ್ಪೆ ಬೀಚ್ ನತ್ತ ಧಾವಿಸುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಂಜೆ ಹೊತ್ತು ಜಿಲ್ಲೆಯ ಮಲ್ಪೆ ಮತ್ತು ಕಾಪು ಬೀಚ್ ಗಳಲ್ಲಿ ಪ್ರವಾಸಿಗರ ದಂಡೇ ಇರುತ್ತದೆ. ವಾರದ ಹಿಂದೆ ಮಲ್ಪೆ ಬೀಚಿನಲ್ಲಿ ಪ್ರವಾಸಿಗರು ನೀರಿನಲ್ಲಿ ಆಟವಾಡುವಾಗ ಅವಘಡ ಸಂಭವಿಸಿ ಮುಳುಗುತ್ತಿದ್ದ ಮೂವರನ್ನು ರಕ್ಷಣೆ ಮಾಡಲಾಗಿತ್ತು. ಇಂತಹ ಘಟನೆ ನಡೆಯುತ್ತಲೇ ಇರುತ್ತವೆ.
ಮುಖ್ಯವಾಗಿ ಬಯಲುಸೀಮೆ ಮತ್ತು ಬೆಂಗಳೂರಿನಿಂದ ಬರುವ ಪ್ರವಾಸಿಗರು ಸಮುದ್ರವನ್ನು ಕಂಡು ಒಮ್ಮಿಂದೊಮ್ಮೆಲೆ ನೀರಿಗಿಳಿಯುತ್ತಾರೆ. ಹಬ್ಬದ ಸಮಯದಲ್ಲಿ ಬರುವ ಪ್ರವಾಸಿಗರು ನೀರಿರುವಾಗ ತುಂಬಾ ಜಾಗರೂಕರಾಗಿರಬೇಕು. ತಂಡಗಳಲ್ಲಿ ನೀರಿಗಿಳಿದು ಆಟವಾಡುವಾಗ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕು. ಸಮುದ್ರತೀರದಿಂದ ತುಂಬಾ ದೂರದವರೆಗೆ ಪ್ರವಾಸಿಗರು ಹೋಗಬಾರದು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
Kshetra Samachara
13/11/2020 08:49 pm