ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಯುವತಿಯ ರಕ್ಷಣೆಗೆ ನೀರಿಗೆ ಹಾರಿದ್ದ ಇಬ್ಬರು ಯುವಕರು- ತಪ್ಪಿದ ಭಾರೀ ಅನಾಹುತ

ಉಡುಪಿ: ಯುವತಿಯ ರಕ್ಷಣೆಗೆ ನೀರಿಗೆ ಹಾರಿದ್ದ ಇಬ್ಬರು ಯುವಕರು ಕೂಡ ಅಪಾಯಕ್ಕೆ ಸಿಲುಕಿ ಎಲ್ಲರೂ ಬದುಕುಳಿದ ಘಟನೆ ಮಲ್ಪೆ ಕಡಲತೀರದಲ್ಲಿ ನಡೆದಿದೆ.

ಬೆಂಗಳೂರಿನ 10 ಜನ ಪ್ರವಾಸಿಗರು ಇಂದು ಬೆಳಗ್ಗೆ ಮಲ್ಪೆಯ ಕಡಲತೀರಕ್ಕೆ ಆಗಮಿಸಿದ್ದರು. ಈ ಪೈಕಿ ಐದಾರು ಜನ ನೀರಿಗಿಳಿದು ಮೋಜು ಮಸ್ತಿಯಲ್ಲಿ ತೊಡಗಿದ್ದರು. ಈ ವೇಳೆ ಯುವತಿಯೊಬ್ಬಳು ನೀರಿನಲ್ಲಿ ಮುಳುಗಿದ್ದರಿಂದ ರಕ್ಷಣೆಗೆ ಇನ್ನಿಬ್ಬರು ನೀರಿಗೆ ಹಾರಿದ್ದರು. ಆದರೆ ಮೂವರು ಕೂಡ ಅಪಾಯಕ್ಕೆ ಸಿಲುಕಿದ್ದರು. ತಕ್ಷಣವೇ ಜೆಟ್ ಸ್ಕೀ ಮತ್ತು ಪ್ರವಾಸಿ ದೋಣಿಯ ಚಾಲಕರು ಸಮುದ್ರ ತೀರದಿಂದ ಸುಮಾರು 20 ಮೀಟರ್ ದೂರದಲ್ಲಿ ಮುಳುಗುತ್ತಿದ್ದ ಮೂವರನ್ನು ರಕ್ಷಿಸಿದ್ದಾರೆ. ಬಳಿಕ ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Edited By : Vijay Kumar
Kshetra Samachara

Kshetra Samachara

09/11/2020 05:02 pm

Cinque Terre

4.22 K

Cinque Terre

0

ಸಂಬಂಧಿತ ಸುದ್ದಿ