ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಾನವೀಯತೆ ಮೆರೆದ ಸಮಾಜಸೇವಕರು; ಗಾಯಾಳು ದನದ ರಕ್ಷಣೆ

ಉಡುಪಿ: ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ದನವನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

ಉಡುಪಿ ರಾ.ಹೆ. 66ರಲ್ಲಿ ದನವೊಂದು ವಾಹನ ಗುದ್ದಿದ್ದರಿಂದ, ಸೊಂಟದ ಸ್ವಾ ಧೀನ ಕಳೆದುಕೊಂಡು ನಡೆಯಲಾಗದೆ, ಮಲಗಿತ್ತು.

ಎರಡು ದಿನಗಳಿಂದ ಹೆದ್ದಾರಿ ಸನಿಹ ಇದೇ ರೀತಿ ಮಲಗಿದ ಸ್ಥಿತಿಯಲ್ಲಿದ್ದ ದನವನ್ನು ಕಂಡ ನಾಗರಿಕ ಸಮಿತಿ ಕಾರ್ಯಕರ್ತರು ಪಶು ವೈದ್ಯರಾದ ಡಾ. ಸಂದೀಪ್ ಕುಮಾರ್ ಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ವೈದ್ಯರು ಗಾಯಾಳು ದನಕ್ಕೆ ಚುಚ್ಚು ಮದ್ದು, ಚಿಕಿತ್ಸೆ ಒದಗಿಸಿ ಚೇತರಿಸಿಕೊಳ್ಳುವಂತೆ ಮಾಡಿದರು.

ದನದ ಕಿವಿಯಲ್ಲಿದ್ದ ಜಾನುವಾರು ಗಣತಿ ಮುದ್ರೆಯಲ್ಲಿದ್ದ, ನೋಂದಣಿ ಸಂಖ್ಯೆಯ ಆಧಾರದಿಂದ ದನದ ವಾರೀಸುದಾರರನ್ನು ಡಾ. ಸಂದೀಪ್ ಕುಮಾರ್ ಪತ್ತೆ ಮಾಡಿದರು. ಮೂಡುಬೆಟ್ಟುವಿನಲ್ಲಿದ್ದ ದನದ ಮಾಲಕರು ಸ್ಥಳೀಯರ ಸಹಕಾರದಿಂದ ವಾಹನದಲ್ಲಿ ಮನೆಗೆ ಕೊಂಡೊಯ್ದರು.

Edited By : Nirmala Aralikatti
Kshetra Samachara

Kshetra Samachara

13/10/2020 07:15 pm

Cinque Terre

4.66 K

Cinque Terre

2

ಸಂಬಂಧಿತ ಸುದ್ದಿ