ಉಡುಪಿ : ಪಡುಬಿದ್ರಿಯ ಬೀಚ್ ತನ್ನ ಮೊದಲ ಪ್ರಯತ್ನದಲ್ಲೇ ಅಂತರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಈ ಬೀಚ್ ನಲ್ಲಿ ಪ್ರವಾಸಿಗರು ಕುಳಿತುಕೊಳ್ಳುವ ಆಸನಗಳು ಮಾತ್ರವಲ್ಲದೆ, ಕುಡಿಯುವ ನೀರು, ಮಕ್ಕಳ ಆಟಿಕೆಗಳು, ಜೀವರಕ್ಷಕ ಸಿಬ್ಬಂದಿ ಹಾಗೂ ಮುಖ್ಯವಾಗಿ ಕಡಲತೀರದ ಸ್ವಚ್ಛತೆ ಉತ್ತಮ ಗುಣಮಟ್ಟದಿಂದ ಕೂಡಿದೆ.
ದೇಶದಲ್ಲಿ ಒಟ್ಟು ಹನ್ನೆರಡು ಕಡಲ ತೀರಗಳು ಬ್ಲೂ ಫ್ಲಾಗ್ ಮಾನ್ಯತೆ ಪಡೆದಿದ್ದು ಅದರಲ್ಲಿ ಕರ್ನಾಟಕದ ಎರಡು ಕಡಲ ತಡಿಗಳು ಆಯ್ಕೆಯಾಗಿವೆ.
ಇನ್ನು ಬೀಚ್ ಗಳಲ್ಲಿನ ಸ್ವಚ್ಚತೆ, ಪರಿಸರ ಸ್ನೇಹಿ ವಾತಾವರಣ ಮತ್ತಿತರೆ ಅಂಶಗಳನ್ನು ಪರಿಗಣಿಸಿ ಪರಿಸರ ಶಿಕ್ಷಣಕ್ಕಾಗಿ ವೇದಿಕೆ’ (ಎಫ್.ಇ.ಇ) ಈ ಬ್ಲೂ ಫ್ಲಾಗ್ ಪ್ರಮಾಣ ಪತ್ರ ನೀಡುತ್ತದೆ.
Kshetra Samachara
12/10/2020 01:24 pm