ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಜಿಲ್ಲೆಯ ಅಮರನಾಥ ಕ್ಷೇತ್ರ ಪ್ರವಾಹಕ್ಕೆ ಸಿಲುಕಿರುವ ಯಾತ್ರಾರ್ಥಿಗಳು ಸಂಪರ್ಕಿಸಿ: ಟೋಲ್ ಫ್ರೀ ಸಂಖ್ಯೆ 1077 (0820-2574802)

ಉಡುಪಿ: ಅಮರನಾಥ ಕ್ಷೇತ್ರದಲ್ಲಿ ಶುಕ್ರವಾರ ಸಂಜೆ 5.30ರ ಸುಮಾರಿಗೆ ಮೇಘಸ್ಫೋಟ ಸಂಭವಿಸಿದೆ. ಇದರಿಂದ ಅಮರನಾಥ ಯಾತ್ರೆ ಮಾರ್ಗದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿ, ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಧಿಡೀರನೇ ಜೋರಾಗಿ ನೀರು ಹರಿದು ಬಂದಿದ್ದರಿಂದ ಯಾತ್ರೆಯ ಮಾರ್ಗದಲ್ಲಿ ಯಾತ್ರಾರ್ಥಿಗಳು ತಂಗಲು ನಿರ್ಮಿಸಿದ್ದ ಟೆಂಟ್ ಗಳು ಪ್ರವಾಹದ ನೀರಿನ ಹೊಡೆತಕ್ಕೆ ಸಿಕ್ಕು ಕೊಚ್ಚಿಕೊಂಡು ಹೋಗಿವೆ. ಹಾಗೂ ಹಲವು ಯಾತ್ರಾರ್ಥಿಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆಂದು ಸುದ್ದಿ ಇರುತ್ತದೆ. ಮೇಘಸ್ಫೋಟದ ಅನಾಹುತ ಬಳಿಕ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಹಾಗಾಗಿ ಈ ಮೂಲಕ ತಿಳಿಸುವುದೇನೆಂದರೆ, ಉಡುಪಿ ಜಿಲ್ಲೆಯಿಂದ ಪವಿತ್ರ ಕ್ಷೇತ್ರವಾದ ಅಮರನಾಥ ಕ್ಷೇತ್ರ ಯಾತ್ರೆ ಕೈಗೊಂಡು, ಮೇಘಸ್ಪೋಟದ ಪ್ರವಾಹಕ್ಕೆ ಸಿಲುಕಿರುವ ಅಥವಾ ಸುರಕ್ಷಿತವಾಗಿರುವ ಯಾತ್ರಾರ್ಥಿಗಳು ಯಾರಾದರೂ ಇದ್ದಲ್ಲಿ ಇವರ ಸಂಬಂಧಿಕರು ಕೂಡಲೇ ಜಿಲ್ಲಾಡಳಿತದ ನಿಯಂತ್ರಣ ಕೊಠಡಿ ಟೋಲ್ ಫ್ರೀ ಸಂಖ್ಯೆ 1077 (0820-2574802) ಕರೆ ಮಾಡಿ ಸಂಬಂಧಪಟ್ಟ ಯಾತ್ರಾರ್ಥಿಗಳ ವಿವರ / ಮಾಹಿತಿಯನ್ನು ನೀಡುವಂತೆ ಕೋರಿದೆ.

Edited By : PublicNext Desk
Kshetra Samachara

Kshetra Samachara

09/07/2022 08:24 pm

Cinque Terre

2.44 K

Cinque Terre

0

ಸಂಬಂಧಿತ ಸುದ್ದಿ