ಉಡುಪಿ: ಬೆಳ್ಳಂಪಳ್ಳಿಯ ಶಾಂತಿ ನಿವಾಸದ ನಿವಾಸಿ ಸಂಜೀವ ಶೆಟ್ಟಿ.(73) ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು .ಮೃತರು ಪತ್ನಿ ,ಒಂದು ಗಂಡು, ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಇವರು ಹಾವಂಜೆ ಗ್ರಾಮದ ಅಂದಿನ ಮಂಡಲ ಪಂಚಾಯತ್ ನಾ ಮಾಜಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು, ಹಾಗೂ ಹಾವಂಜೆ ಗ್ರಾಮದ ಮುಗ್ಗೇರಿಯ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಬೆಳ್ಳಂಪಳ್ಳಿಯ ಭೂತರಾಜ ದೇವಸ್ಥಾನ ದುರ್ಗಾಪರಮೇಶ್ವರಿ ದೇವಸ್ಥಾನ ಬೆಳ್ಳಂಪಳ್ಳಿ ಮೊದಲಾದ ಧಾರ್ಮಿಕ ಕೇಂದ್ರದಲ್ಲಿ ಪದಾಧಿಕಾರಿಗಳಾಗಿದ್ದು ಸೇವೆ ಸಲ್ಲಿಸಿದ್ದರು.ಮಾತ್ರವಲ್ಲ, ಸ್ಥಳೀಯ ಸಂಘ ಸಂಸ್ಥೆಯಲ್ಲಿ ಜನಸೇವಕರಾಗಿ ಜನಮನ್ನಣೆ ಪಡೆದಿದ್ದರು. ಮೃತರ ಮನೆಗೆ ಮಾಜಿ ಸಚಿವ ವಿನಯಕುಮಾರ್ ಸೊರಕೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.
Kshetra Samachara
05/07/2022 03:34 pm