ಉಡುಪಿ: ಆಗುಂಬೆ ಘಾಟಿಯ ಮೂರನೇ ತಿರುವಿನಲ್ಲಿ ರಸ್ತೆಗೆ ಮರ ಉರುಳಿ ಬಿದ್ದ ಪರಿಣಾಮ ಸಂಚಾರ ವ್ಯತ್ಯಯವಾಗಿದೆ. ಪೊಲೀಸ್ ಹಾಗೂ ಸಾರ್ವಜನಿಕರು ಸೇರಿ ಮರ ತುಂಡರಿಸಿ ತೆರವುಗೊಳಿಸಿದರು.
ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ವಾಹನ ಸಂಚಾರ ವ್ಯತ್ಯಯ ಉಂಟಾಗಿತ್ತು. ಘಾಟಿಯಲ್ಲಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಡ್ಡಲಾಗಿ ಬಿದ್ದಿದ್ದ ಮರದ ಕೆಳಗೆ ಸ್ವಲ್ಪ ಜಾಗವಿದ್ದಿದ್ದರಿಂದ ಕಾರುಗಳು, ಬೈಕ್‌ಗಳು ಸಂಚರಿಸಿದವು. ಆಗುಂಬೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಮರವನ್ನು ಕತ್ತರಿಸಿದರು. ಆ ಬಳಿಕ ವಾಹನ ಸಂಚಾರ ಸುಗಮವಾಯಿತು.
Kshetra Samachara
02/06/2022 01:41 pm