ಉಡುಪಿ: ಬಂಗಾಳಕೊಲ್ಲಿಯಲ್ಲಿ ಆಸಾನಿ ಚಂಡಮಾರುತದ ಎಫೆಕ್ಟ್ ನಿಂದಾಗಿ ಜಿಲ್ಲೆಯಲ್ಲಿ ಇವತ್ತೂ ಕೂಡ ಜಿಟಿಜಿಟಿ ಮಳೆಯಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 33 ಮಿಲಿಮೀಟರ್ ಸರಾಸರಿ ಮಳೆಯಾಗಿದೆ.ಚಂಡಮಾರುತ ಪ್ರಭಾವದಿಂದಾಗಿ
ಜಿಲ್ಲೆಯಾದ್ಯಂತ ಮೋಡಮುಸುಕಿದ ವಾತಾವರಣ ನೆಲೆಸಿದೆ.
ಮುಂದಿನ ಎರಡು ದಿನ ಮಳೆ ಬರುವ ಸಾಧ್ಯತೆ ಇರುವುದಾಗಿ ಉಡುಪಿ ಜಿಲ್ಲಾ ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಈ ಹಿನ್ನೆಲೆಯಲ್ಲಿ ಮೀನುಗಾರರು ಕಡಲಿಗೆ ಇಳಿಯುವಾಗ ಜಾಗರೂಕರಾಗಿರುವಂತೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.
Kshetra Samachara
13/05/2022 05:46 pm