ಕಾರ್ಕಳ: ಬಿಸಿಲ ಧಗೆಯಿಂದ ಕಂಗೆಟ್ಟಿದ್ದ ಉಡುಪಿಯಲ್ಲಿ ಮೊದಲ ಮಳೆಯ ಸಿಂಚನವಾಯಿತು. ಜಿಲ್ಲೆಯ ಕಾರ್ಕಳ ತಾಲೂಕಿನ ಹಲವೆಡೆ ಇಂದು ಸಂಜೆ ಮಳೆ ಸುರಿದಿದೆ.ಉಡುಪಿ ತಾಲೂಕಿನಲ್ಲೂ ಮೋಡ ಕವಿದ ವಾತಾವರಣ ಸಹಿತ ಸಾಧಾರಣ ಮಳೆಯಾಗಿದೆ.
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಬಿಸಿಲ ಧಗೆ ಮಿತಿಮೀರಿತ್ತು. ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಕೂಡ ನೀಡಿತ್ತು.
ಮುಸ್ಸಂಜೆ ವೇಳೆ ಸುರಿದ ಸಾಧಾರಣ ಮಳೆಯಿಂದಾಗಿ ಕಾರ್ಕಳ ಉತ್ಸವಕ್ಕೆ ತುಸು ಅಡ್ಡಿಯಾಯಿತು.
ಉತ್ಸವದ ಮೆರವಣಿಗೆ ಮತ್ತು ಸಭಾಕಾರ್ಯಕ್ರಮಕ್ಕೆ ಮಳೆ ಅಡ್ಡಿಪಡಿಸಿದರೂ ನೆರೆದ ಜನ ಮೊದಲ ಮಳೆಯ ರೋಮಾಂಚನಕ್ಕೊಳಗಾದರು.
Kshetra Samachara
18/03/2022 09:25 pm