ಉಡುಪಿ: ಕರಾವಳಿಯಲ್ಲಿ ನವೆಂಬರ್ ಹದಿನೈದರ ಹೊತ್ತಿಗೆ ಮಳೆಗಾಲವನ್ನು ನೆನಪಿಸುವ ಮಳೆತಾಗುತ್ತಿದೆ. ನಿನ್ನೆಯಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಜನ ಹೈರಾಣಾಗಿದ್ದಾರೆ. ದಿನವಿಡೀ ಮೋಡ ಕವಿದ ವಾತಾವರಣವಿದ್ದು ಜಿಲ್ಲೆಯಾದ್ಯಂತ ಬಿಟ್ಟೂಬಿಡದೆ ಮಳೆಯಾಗುತ್ತಿದೆ.
ಇದರಿಂದಾಗಿ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಗೋಳು ತಪ್ಪಿದ್ದಲ್ಲ. ದೀಪಾವಳಿ ನಂತರ ಎರಡು ದಿನ ಮಳೆ ಬಿಟ್ಟಿತ್ತು. ಆದರೆ ಕಳೆದ ಎರಡು ದಿನಗಳಿಂದ ನಿರಂತರ ಮೋಡ ಕವಿದ ವಾತಾವರಣವಿದ್ದು ಮಳೆ ಎಲ್ಲವನ್ನೂ ಹಾಳುಮಾಡುತ್ತಿದೆ.ಮುಖ್ಯವಾಗಿ ಭತ್ತದ ಫಸಲು ಬರುವ ಸಮಯ ಇದಾಗಿದ್ದು ಇಡೀ ದಿನ ಬಿಡದೆ ಸುರಿಯುವ ಮಳೆಯಿಂದಾಗಿ ಭತ್ತದ ಕೃಷಿಕರೂ ಕೂಡ ತೊಂದರೆಗೊಳಗಾಗಿದ್ದಾರೆ.
Kshetra Samachara
15/11/2021 06:18 pm