ಉಡುಪಿ: ತಾಯಿ ಗೂಬೆಯಿಂದ ದೂರವಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ಮರಿಗೂಬೆಯೊಂದು ಬನ್ನಂಜೆಯ ಸಾಯಿರಾಧಾ ವಸತಿ ಸಂಕೀರ್ಣದ ವಾಹನ ನಿಲುಗಡೆ ಸ್ಥಳದಲ್ಲಿ ಕಂಡುಬಂದಿದ್ದು, ಸಂಕೀರ್ಣದ ನಿವಾಸಿ ರೋಶನಿ ಶೆಟ್ಟಿ ಅವರು ಗೂಬೆ ಮರಿಯನ್ನು ರಕ್ಷಿಸಿ, ಆಹಾರ ನೀಡಿ ಉಪಚರಿಸಿದ್ದರು.
ಅವರು ನೀಡಿದ ಮಾಹಿತಿಯಂತೆ ನಾಗರಿಕ ಸಮಿತಿ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಗೂಬೆ ಮರಿಯನ್ನು ಅರಣ್ಯ ರಕ್ಷಕ ಕೇಶವ ಪೂಜಾರಿ ಅವರಿಗೆ ಹಸ್ತಾಂತರಿಸಿದರು.
ಈ ಗೂಬೆ ಮರಿಯು ಅಪರೂಪದ ಬಿಳಿ ಪ್ರಬೇಧದ ಗೂಬೆ ಎಂದು ತಿಳಿದುಬಂದಿದೆ.
Kshetra Samachara
31/12/2020 06:08 pm