ಬ್ರಹ್ಮಾವರ: ಕಳೆದ 2 ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ, ಸಂಕಷ್ಟದ ಸ್ಥಿತಿಯಲ್ಲಿರುವ ಹೇರೂರು, ಕೆ.ಜಿ ರೋಡ್, ಕೊಳಲಗಿರಿ , ಮಣಿಪುರ, ಕಟಪಾಡಿ ಕುರ್ಕಾಲು, ಹೂಡೆ ಹಾಗೂ ಉಪ್ಪೂರು ಬಳಿಯ ನೆರೆ ಹಾವಳಿಯಿಂದ ತತ್ತರಿಸಿರುವ ಜನರ ಹಾಗೂ ಪ್ರಾಣಿಗಳ ಜೀವ ರಕ್ಷಣೆಯಲ್ಲಿ ಎಸ್ ಎಸ್ ಎಫ್ ಪ್ರಮುಖ ಪಾತ್ರ ವಹಿಸಿದೆ.
ಅಗ್ನಿಶಾಮಕ ದಳ, ಕಂದಾಯ ಇಲಾಖೆಯೊಂದಿಗೆ ಮತ್ತು ಸ್ಥಳೀಯ ಪಂಚಾಯತ್ ಸದಸ್ಯರೊಂದಿಗೆ ಕೈಜೋಡಿಸಿ ಈ ಸಂಸ್ಥೆ ಮಾನವೀಯ ಸೇವೆ ಕೈಗೊಂಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಉಪ್ಪೂರು ರಾ. ಹೆ.ಯಲ್ಲಿ ನಿಂತಿದ್ದ ನೆರೆನೀರು ತೆರವು ಮಾಡಿ ಸುಗಮ ವಾಹನ ಸಂಚಾರಕ್ಕೂ ಎಸ್ಸೆಸ್ಸೆಫ್ ಸ್ವಯಂಸೇವಕರ ಸೇವೆ ಗಮನಾರ್ಹ.
ಉಡುಪಿ ಡಿವಿಜನ್ ಡಿಫೆನ್ಸ್ ಪೋರ್ಸ್ ಹೆಲ್ಪ್ ಡೆಸ್ಕ್ ತಂಡದ ಚೇರ್ಮನ್ ಮಜೀದ್ ಕಟಪಾಡಿ ನೇತೃತ್ವದಲ್ಲಿ , ಕನ್ವೀನರ್ ಆಸೀಫ್ ಸರಕಾರಿಗುಡ್ಡೆ, ಕಯ್ಯೂಮ್ ಮಲ್ಪೆ, ಬಿಲಾಲ್ ಮಲ್ಪೆ, ಸಿದ್ದೀಕ್ ಸಂತೋಷ್ ನಗರ, ನಾಸೀರ್ ಭದ್ರಗಿರಿ, ಇಮ್ತಿಯಾಜ್ ಹೊನ್ನಾಳ, ಅಲ್ತಾಫ್ ಮಲ್ಪೆ, ನಝೀರ್ ಸಾಸ್ತಾನ, ಇಬ್ರಾಹಿಂ ರಂಗನಕೆರೆ, ಸಂಶುದ್ದೀನ್, ಸುಲೈಮಾನ್ , ಫಾರೂಕ್ , ಮುತ್ತಲಿಬ್ ಬಾರ್ಕೂರು, ಇಮ್ರಾನ್ ಹೊನ್ನಾಳ ,ಸಲ್ಮಾನ್ ಮಣಿಪುರ, ಇರ್ಷಾದ್ ಮಣಿಪುರ, ರಫೀಕ್ ಕಟಪಾಡಿ, ಶಮೀರ್ ಮಣಿಪುರ, ಸಫ್ವಾನ ಮಣಿಪುರ, ಸಿಹಾನ್ ಹೂಡೆ, ಫಾಯಿಝ್ ಹೂಡೆ ಈ ಸೇವೆಯಲ್ಲಿ ಕೈಜೋಡಿಸಿದ್ದರು.
Kshetra Samachara
21/09/2020 10:25 pm