ಉಡುಪಿ ಜಿಲ್ಲಾ ಕೃಷಿಕ ಸಂಘದ ನೇತೃತ್ವದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ವಿರೋಧಿ ಸಮಿತಿ ವತಿಯಿಂದ ಪಾಪನಾಶಿನಿ ನದಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿರುದ್ಧ ಪ್ರತಿಭಟನೆ ನಡೆಯಿತು. ಕುರ್ಕಾಲು ಯೋಜನೆ ಪ್ರದೇಶದ ವಠಾರದಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬಹುಗ್ರಾಮ ಕುಡಿಯುವ ನೀರಿಗಾಗಿ ಆಯ್ಕೆ ಮಾಡಿರುವ ಸ್ಥಳವೇ ಅವೈಜ್ಞಾನಿಕವಾಗಿದೆ. ಈ ಯೋಜನೆಯ ಅನುಷ್ಠಾನದಿಂದ ಜನರ ತೆರಿಗೆ ಹಣ ಪೋಲಾಗಲಿದೆ. ಹಿಂದಿನಿಂದಲೂ ನೀರಿನ ಒರತೆ ಹೊಂದಿರದ ಕಾರಣದಿಂದ ಮಾರ್ಚ್- ಮೇ ಅವಧಿಯಲ್ಲಿ ಈ ನದಿಯಲ್ಲಿ ಸ್ಥಳೀಯರ ಬಳಕೆಗೆ, ಕೃಷಿಗೆ ಸಾಕಷ್ಟು ನೀರು ಇರುವುದಿಲ್ಲ. ಯೋಜನೆ ಜಾರಿಗೆ ಬಂದರೆ ಮಣಿಪುರ, ಕುರ್ಕಾಲು, ಕುಂಜಾರು ಗ್ರಾಮಗಳ ಜನರ ಕುಡಿಯುವ ಮತ್ತು ಕೃಷಿ ನೀರಿನ ಮೂಲಗಳ ಸೆಲೆಗಳು ಬತ್ತಿ ಹೋಗಲಿವೆ. ಅಲ್ಲಿ ಉಪ್ಪು ನೀರು ತುಂಬಿಕೊಳ್ಳಲಿದೆ.
ಈ ಹಿನ್ನೆಲೆಯಲ್ಲಿ ಸಮಸ್ಯೆ ಎದುರಾಗುವ ಮುನ್ನವೇ ಯೋಜನೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ನಿರ್ಣಯ ಕೈಗೊಂಡರು. ಪ್ರತಿಭಟನೆ ಸ್ಥಳಕ್ಕಾಗಮಿಸಿದ ಕಾಪು ತಹಶೀಲ್ದಾರ್ ಶ್ರೀನಿವಾಸಮೂರ್ತಿ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
Kshetra Samachara
30/03/2022 02:34 pm