ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಬಿದ್ರಿ : "ಕಡಲಾಮೆ ಸಂತತಿ ರಕ್ಷಣೆಯಿಂದ ಮತ್ಸ್ಯ ಕ್ಷಾಮ ದೂರ"

ಕಾಪು: ಕಡಲಾಮೆ ಸಂತತಿಯನ್ನು ನಾವು ರಕ್ಷಿಸಿ ದ್ದಲ್ಲಿ ಮತ್ಸ್ಯ ಸಂಪತ್ತು ಸಮುದ್ರದಲ್ಲಿ ಹೆಚ್ಚುತ್ತದೆ ಎಂದು ಕುಂದಾಪುರದ ಎಫ್‌ಎಸ್‌ಎಲ್ ಸರಕಾರೇತರ ಸಾಮಾಜಿಕ ಸಂಸ್ಥೆ ರಾಕೇಶ್ ಸೋನ್ಸ್ ಹೇಳಿದರು.

ಅವರು ಗುರುವಾರ ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ನಡೆದ ಕಡಲಾಮೆ ಸಂತತಿಯ ರಕ್ಷಣೆ ಕುರಿತ ಮಾಹಿತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಪರಿಸರ ಸಂರಕ್ಷಣೆಯಲ್ಲಿ ಆಮೆ ಪ್ರಮುಖ ಪಾತ್ರ ವಹಿಸುತ್ತವೆ. ಕಡಲಿನಲ್ಲಿ ಆಮೆ ಸಂತತಿಗೂ ಮನುಷ್ಯ ಬಯಸುವ ಮೀನಿನ ಸಂಪತ್ತಿಗೂ ಅವಿನಾಭಾವ ಸಂಬಂಧವಿದೆ. ಮೀನಿನ ಮರಿಗಳು ಇವುಗಳಿಂದಲೇ ರಕ್ಷಿಸಲ್ಪಡುತ್ತದೆ.

ಇತ್ತೀಚಿನ ದಿನಗಳಲ್ಲಿ ಕಡಲಾಮೆ ಸಂತತಿ ತೀರಾ ಕಡಿಮೆಯಾಗುತ್ತಿದೆ. ಇದರಿಂದಾಗಿ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತಿದೆ ಎಂದರು.

ಕಡಲಾಮೆ ರಕ್ಷಣೆ ಬಗ್ಗೆ ಸ್ಥಳೀಯರಿಗೆ ಹಾಗೂ ಬ್ಲೂಫ್ಲ್ಯಾಗ್ ಬೀಚ್‌ನ ಸಿಬ್ಬಂದಿಗೆ ಮಾಹಿತಿ ಶಿಬಿರ ನಡೆಯಿತು.

ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್ ಬಿ.ಕೆ., ಕರಾವಳಿ ಪ್ರವಾಸೋಧ್ಯಮ ಅಸೋಸಿಯೇಶನ್ ಅಧ್ಯಕ್ಷ ಮನೋಹರ್ ಶೆಟ್ಟಿ, ಗೌರವ್ ಶೇಣವ, ಪ್ರವಾಸೋದ್ಯಮ ಇಲಾಖೆಯ ಅಮಿತ್, ರಮೇಶ್ ಕುಮಾರ್, ಗ್ರಾಪಂ ಮಾಜಿ ಸದಸ್ಯ ಅಶೋಕ್ ಪಡುಬಿದ್ರಿ, ಸಾಗರ್ ವಿದ್ಯಾಮಂದಿರ ಶಾಲೆ ಸಂಚಾಲಕ ಸುಕುಮಾರ್ ಶ್ರೀಯಾನ್, ಯತಿನ್ ಬಂಗೇರ, ಬ್ಲೂಫ್ಲ್ಯಾಗ್ ಬೀಚ್‌ ಮ್ಯಾನೇಜರ್ ವಿಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

26/11/2020 06:33 pm

Cinque Terre

5.91 K

Cinque Terre

0

ಸಂಬಂಧಿತ ಸುದ್ದಿ