ಕಾಪು : ಕಳೆದ ಹಲವು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಜಲಾವೃತಗೊಂಡು ಮನೆ ಹಾನಿಗೊಳಗಾದ ಕುಟುಂಬಸ್ಥರ ನೆರವಿಗಾಗಿ, ಅಂಬೇಡ್ಕರ್ ಯುವಸೇನೆ ತಾಲೂಕು ಸಮಿತಿ ವತಿಯಿಂದ ಕಾಪು ತಾಲೂಕು ತಹಸೀಲ್ದಾರರು ,ಪುರಸಭೆ ಅಧಿಕಾರಿ ಹಾಗು ಗ್ರಾ.ಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಾಪು ತಾಲೂಕಿನಲ್ಲಿ ನೆರೆಪೀಡಿತ ಗ್ರಾಮಕ್ಕೆ ಸಂಸ್ಥೆಯ ಗೌರವಧ್ಯಕ್ಷರಾದ ಕೃಷ್ಣ ಬಂಗೇರ ಇವರ ಸೂಚನೆಯ ಮೇರೆಗೆ ಭೇಟಿ ನೀಡಿದ ಅಂಬೇಡ್ಕರ್ ಯುವಸೇನೆ ತಾಲೂಕು ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯಕರ್ತರು ಕಾಪು ತಹಶಿಲ್ದಾರ್ ಹಾಗು ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಭೀಕರ ನೆರೆಯಿಂದ ಮನೆಗಳು ಬಿರುಕು ಬಿಟ್ಟು ಹಾನಿ ಉಂಟಾದ ಕುಟುಂಬಸ್ಥರಿಗೆ ತುರ್ತು ಪರಿಹಾರವನ್ನು ಹಾಗೂ ಮನೆಯು ಸಂಪೂರ್ಣವಾಗಿ ಹಾನಿಗೊಳಗಾದ ಕುಟುಂಬಗಳಿಗೆ ಸರಕಾರದ ಯೋಜನೆಯಡಿಯಲ್ಲಿ ಹೊಸ ಮನೆಯನ್ನು ನಿರ್ಮಿಸಿಕೊಡುವಂತೆ ಅಧಿಕಾರಿಗಳನ್ನು ವಿನಂತಿಸಿಕೊಂಡಿದ್ದಾರೆ.
ಅಂಬೇಡ್ಕರ್ ಯುವಸೇನೆ ತಾಲೂಕು ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕಂಚಿನಡ್ಕ,ಉಪಾಧ್ಯಕ್ಷರುಗಳಾದ ಜಗದೀಶ್ ಕಾಪು, ಮನೋಹರ್, ಕಾರ್ಯದರ್ಶಿ ವಸಂತ ಪಾದೆಬೆಟ್ಟು, ಕೋಶಾಧಿಕಾರಿ ಸುಜಿತ್, ಮುಖಂಡರಾದ ರಾಕೇಶ್ ಉಪಸ್ಥಿತರಿದ್ದರು.
Kshetra Samachara
23/09/2020 09:41 pm