ಉಡುಪಿ: ಕಳೆದ ಐದು ದಿನಗಳಿಂದ ಪಶ್ಚಿಮ ಕರಾವಳಿ ತೀರದಲ್ಲಿ ಅಬ್ಬರಿಸಿದ್ದ ವರುಣ ಇಂದು ಶಾಂತನಾಗಿದ್ದಾನೆ. ಆದರೆ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಹೀಗಾಗಿ ಪ್ರವಾಸಿಗರು, ನಾಡದೋಣಿ, ಆಳಸಮುದ್ರ ಮೀನುಗಾರರಿಗೆ ಮುನ್ನೆಚ್ಚರಿಕೆಯನ್ನು ಉಡುಪಿ ಜಿಲ್ಲಾಡಳಿತ ನೀಡಿದೆ.
ಸಮುದ್ರ ಪ್ರಕ್ಷುಬ್ಧ ಇರುವಾಗ ಯಾರೂ ನೀರಿಗೆ ಇಳಿಯಬಾರದು ಹಾಗೂ ಈಜಾಡಬಾರದು ಎಂದು ಜಿಲ್ಲಾಡಳಿತವು ಪ್ರವಾಸಿಗರಿಗೆ ಎಚ್ಚರಿಕೆ ನೀಡಿದೆ. ಎಲ್ಲಾ ಬೀಚ್‌ಗಳಲ್ಲಿ ಮುಳುಗು ತಜ್ಞರು, ಬೀಚ್ ಅಭಿವೃದ್ಧಿ ಸಮಿತಿಯವರು ಪ್ರವಾಸಿಗರನ್ನು ಕಡಲಿಗಿಳಿಯದಂತೆ ತಡೆದರೂ ಅನೇಕ ಪ್ರವಾಸಿಗರು ಸೂಚನೆಗಳನ್ನು ಉಲ್ಲಂಘಿಸಿ ಸಮುದ್ರಕ್ಕಿಳಿಯುತ್ತಿದ್ದಾರೆ. ಇದೇ ರೀತಿ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದ ಬೆಂಗಳೂರಿನ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಮಲ್ಪೆ, ಕಾಪು, ಪಡುಬಿದ್ರೆ, ಮರವಂತೆ ಬೀಚ್ ನಲ್ಲಿ ಪ್ರವಾಸಿಗರು ಬಹಳ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ.
Kshetra Samachara
19/10/2020 08:57 pm