ಮಂಗಳೂರು : ಕೆ.ಪಿ.ಟಿ.ಸಿ.ಎಲ್ ನಿಂದ 220 ಕೆವಿ ಎಂಎಸ್ ಇಝಡ್ ಬಜಪೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಕಟೀಲು ದೇವಸ್ಥಾನ, ಪೆರಾರ, ಈಶ್ವರಕಟ್ಟೆ, ಕಳವಾರು, ಪೆರ್ಮುದೆ, ಬಜಪೆ ಟೌನ್, ಸುಂಕದಕಟ್ಟೆ, ವಾಟರ್ ಸಪ್ಲೈ ಫೀಡರ್ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಈಶ್ವರ ಕಟ್ಟೆ, ಮುರ, ಶಾಸ್ತಾವು, ಕಿನ್ನಿಕಂಬ್ಳ, ಮೂಡುಪೆರಾರ, ಕೊಳಪಿಲ, ಅರಿಕೆಪದವು, ಶಾಲೆಪದವು, ಕೊಂಪದವು, ಕರಿಕುಮೇರು, ಕಾಪಿಕಾಡು, ನೆಲ್ಲಿಗುಡ್ಡೆ, ಕಲ್ಪನೆ, ಈಶ್ವರಕಟ್ಟೆ, ಮುಂಡಬೆಟ್ಟು, ಬೆಂಗ್ಲೆ, ಕತ್ತಲ್ ಸಾರ್, ಸೌಹಾರ್ದನಗರ, ಸಿದ್ಧಾರ್ಥ ನಗರ, ಜರಿನಗರ, ಅಂಬಿಕಾನಗರ, ಸುಂಕದಕಟ್ಟೆ, ಪೆರ್ಮುದೆ, ಭಟ್ರಕೆರೆ, ಸ್ವಾಮಿಲಪದವು, ಹುಣ್ಸೆಕಟ್ಟೆ, ಕಳವಾರು, ಜೋಕಟ್ಟೆ, ಆಶ್ರಯ ಕಾಲನಿ, ಕೆಂಜಾರ್, ಎಚ್.ಪಿ.ಸಿ.ಎಲ್ ಕಾಲನಿ, ಜೋಕಟ್ಟೆ, ಜಂಕ್ಷನ್, ಎಂಎಸ್ಇಝಡ್ ಕಾಲನಿ ಕೊಂಚಾರು, ಶಾಂತಿಗುಡ್ಡೆ, ಬಜಪೆ, ಕಿನ್ನಿಪದವು, ಬಿ.ಪಿ.ಕಂಪೌಂಡ್, ಬಜಪೆ ಸಿಟಿ, ಅಡ್ಕಬಾರೆ, ಮರವೂರು ಡ್ಯಾಂ ವಾಟರ್ ಸಪ್ಲೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
33/11ಕೆವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆವಿ ಮಾರ್ಕೆಟ್ ಫೀಡರ್ ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಲೇಡಿಗೋಷನ್ ಹಾಸ್ಪಿಟಲ್, ಸೆಂಟ್ರಲ್ ಮಾರ್ಕೆಟ್, ಶಾಂತದುರ್ಗ, ಜಿ.ಎಚ್.ಎಸ್.ರಸ್ತೆ, ಪಿ.ಎಂ.ರಾವ್ ರೋಡ್, ಗೌರಿಮಠ ರಸ್ತೆ, ರಾಘವೇಂದ್ರ ಮಠ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
110/33/11ಕೆವಿ ಬಿಜೈ ಉಪಕೇಂದ್ರದಿಂದ ಹೊರಡುವ 11ಕೆವಿ ಭಾರತಿ ನಗರ ಫೀಡರ್ ಟಿಟಿನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತಿನಗರ, ಚಂದ್ರಿಕಾ ಬಡಾವಣೆ, ಕೊಡಿಯಾಲ್ ಗುತ್ತು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
Kshetra Samachara
20/09/2022 04:13 pm