ಮಂಗಳೂರು: ಮನಪಾ ನೀರು ಸರಬರಾಜು ವ್ಯವಸ್ಥೆಯ ತುಂಬೆ ಎಚ್ಎಲ್ ಪಿಎಸ್-1 18 ಎಂಜಿಡಿ ರೇಚಕ ಸ್ಥಾವರ ಪಂಪಿಂಗ್ ಮಾಡುವ 900 ಎಂಎಂ ವ್ಯಾಸದ ಕೊಳವೆಯು ಕೂಳೂರಿನ ಸ್ಕಂದ ಹೊಟೇಲ್ ಹಾಗೂ ಕೊಟ್ಟಾರ ಚೌಕಿ ಬಳಿ ಸೋರಿಕೆ ಉಂಟಾಗಿದೆ. ಆದ್ದರಿಂದ ತುರ್ತು ದುರಸ್ತಿ ಮಾಡುವ ಅವಶ್ಯಕತೆಯಿದೆ.
ಆದ್ದರಿಂದ ಜುಲೈ 17ರಂದು ಬೆಳಗ್ಗೆ 6ರಿಂದ 18 ರ ಬೆಳಗ್ಗೆ 6ರವರೆಗೆ ನಗರದ ಸುರತ್ಕಲ್, ಕಾಟಿಪಳ್ಳ, ಕೂಳೂರು, ಜಲ್ಲಿಗುಡ್ಡೆ, ಕೋಡಿಕಲ್, ಭಾಗಶಃ ಕಾನ, ಬಾಳ, ಕುಳಾಯಿ, ಮುಕ್ಕ, ಪಣಂಬೂರು ಇತ್ಯಾದಿ ಪ್ರದೇಶಗಳಲ್ಲಿ ಸಂಪೂರ್ಣ ನೀರು ನಿಲುಗಡೆಗೊಳಿಸಲಾಗುತ್ತದೆ. ಆದ್ದರಿಂದ ಈ ಪ್ರದೇಶದಲ್ಲಿ ನೀರು ಸರಬರಾಜಿನ ವ್ಯತ್ಯಾಸವಾಗಲಿದೆ.
Kshetra Samachara
15/07/2022 09:35 pm